Submission 1780

ಸಿಕ್ಕರೂ ಸಿಗದ ನನ್ನವನು

Submitted By: Ashwini Nayak

----------------------------------

ಒಲವಿನ ರಾಗವೋ ಮಧುರ ಮೌನವೋ ದೂರದ ಸೆಳೆತವೋ ಹತ್ತಿರದ ಬಂಧವೋ ಹೃದಯ ಮುಟ್ಟುವ ಧ್ವನಿಯೋ ಕಣ್ಣಿಗೆ ಕಾಣದ ಸಮುದ್ರದ ಕೊನೆಯೋ ಮನವ ಬಿಚ್ಚಿಡುವ ಕನ್ನಡಿಯೋ ಕೊನೆ ಪುಟ ಇಲ್ಲದ ಪುಸ್ತಕವೋ ಬೆರಳು ಬಯಸುವ ಸ್ಪರ್ಶವೋ ಜೊತೆ ಸಾಗುತ್ತಿರುವ ಬೆಳಕಿನ ಕಿರಣವೋ ಸಿಕ್ಕರು ಸಿಗದ ಜೇನಿನ ಸಿಹಿಯೋ ಜೊತೆ ನಡೆದರು ಕೈಗೆ ಸಿಗದ ನೆರಳಿನ ಛಾಯೆಯೋ ದೊರೆತರು ದೊರಕದ ಬೇಸರವೋ ಪ್ರಾರಂಭದ ಕೊನೆಯ ಅಂತ್ಯವೋ

----------------------------------

Reg ID: HF25-5105

Please Note - You can vote only Once. If you have already voted - the voting will be disabled automatically by the system.

0
Votes
165
Views
1 Year
Since posted

VOTING Closed on Nov 30, 2025!

Scroll to Top