Submission 1977

ಪ್ರೀತಿಯ ತ್ಯಾಗ

Submitted By: Sharanabasava

----------------------------------

ನಿನ್ನ ನಗುವ ನೋಡಲು, ನನ್ನ ಪ್ರೀತಿ ಅಡಗಿತು. ಮನಸಿನ ಮಾತು ಹೇಳಲಾಗದೆ, ಮೌನದಿ ಮುಳುಗಿತು. ಬಾಲ್ಯದ ಕನಸು, ಪ್ರೀತಿಯ ನಗುವಾಗಿತ್ತು. ನಿನ್ನ ಆಸೆಗಳಲ್ಲಿ ನನ್ನ ಪ್ರೀತಿ ಸೋತಿತ್ತು. ​ನೀನು ಬೇರೆಯವರನ್ನು ಪ್ರೀತಿಸಿದಾಗ, ನನ್ನ ಹೃದಯ ಒಡೆದಿತ್ತು. ನನಗೆ ಪ್ರೀತಿ ಸಿಗಲಿಲ್ಲವೆಂದು, ಕಣ್ಣೀರು ಹೇಳಿತ್ತು. ನಿನ್ನ ಸಂತೋಷವೇ ನನ್ನ ಸಂತೋಷವೆಂದು ನಂಬಿದ್ದೆ. ಆ ನೋವಿನಲ್ಲೂ ನಿನಗಾಗಿ ನಗು ಬೀರಿದ್ದೆ. ​ನೀನು ನನ್ನೆಡೆಗೆ ತಿರುಗಿ ಬಂದಾಗ, ನನ್ನ ಹಾದಿ ದೂರವಾಗಿತ್ತು. ನನ್ನ ಪ್ರೀತಿ ನಿಷ್ಕಲ್ಮಶವಾಗಿತ್ತು, ಅದಕ್ಕೆ ಅದು ನಿನಗಾಗಿ ತ್ಯಾಗವಾಗಿತ್ತು. ​ನಿನ್ನ ಮದುವೆಗೆ ನಾನು ನೆರವಾಗಿದ್ದೆ, ನನ್ನ ಪ್ರೀತಿಯನ್ನು ನಾನೇ ಕೊಂದಿದ್ದೆ. ನಿನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೆ, ಆದರೆ ನನ್ನ ಪ್ರೀತಿ ಜೀವಂತವಾಗಿತ್ತು.

----------------------------------

Reg ID: HF25-5142

Please Note - You can vote only Once. If you have already voted - the voting will be disabled automatically by the system.

0
Votes
177
Views
1 Year
Since posted

VOTING Closed on Nov 30, 2025!

Scroll to Top