Submission 515

ಅಂತರಾಳ

ರಚನೆ : ದಿವ್ಯ.ಸಿ

----------------------------------

ಬರೆಯಲು ಕೈಯಲ್ಲಿ ಲೇಖನಿ ಹಿಡಿದಿರುವೆ ಆದರೂ ಮನಸ್ಸೆಲ್ಲ ಖಾಲಿ ಖಾಲಿಯಾಗಿದೆ ಪ್ರತಿ ಕ್ಷಣವನ್ನು ನೆನಪಿನ ಬುತ್ತಿಯಲ್ಲಿಡಲು ಸೋತಿರುವೆ ಹೃದಯ, ಭಾವನೆಗಳ ಸಂಘರ್ಷದಲ್ಲಿ ಸೋತಿದೆ ಹೇಳಲು ನೂರಾರು ಮಾತುಗಳಿವೆ ಆದರೂ ಇಂದೇಕೋ ಮೌನವೇ ಹಿತವಾಗಿದೆ ರಚ್ಚೆ ಹಿಡಿದ ಮನವ ಸಂತೈಸಲಾಗದೆ ಒದ್ದಾಡುತ್ತಿರುವೆ ವಾಸ್ತವವೋ, ಕಲ್ಪನೆಯೋ ತಿಳಿಯದೆ ಬದುಕು ನಿಂತ ನೀರಾಗಿದೆ ಏನೊಂದು ತಿಳಿಯದೆ ಸಂತೆಯಲ್ಲಿ ಕಳೆದುಹೋಗಿರುವ ಮಗುವಿನಂತಾಗಿರುವೆ ಎಲ್ಲದಕ್ಕೂ ಉತ್ತರ ಹುಡುಕುವ ದಾರಿಯೆ ಮರೆತೋಗಿದೆ ಭಾವನೆಗಳೇ ಇಲ್ಲದೆ ಯಾಂತ್ರಿಕವಾಗಿ ಬದುಕುತ್ತಿರುವೆ ಆದರೂ ಏಕಾಂತವನ್ನ ಮನ ಒಪ್ಪಿ ಅಪ್ಪಿಯಾಗಿದೆ....

----------------------------------

ನೋಂದಣಿ ಐಡಿ : KPF-S1-5085

0
Votes
159
Views
1 Year
Since posted

Finished since 453 days, 15 hours and 18 minutes.

Scroll to Top