ಅಗ್ನಿಶಿಖೆ
Submitted By: SUSHILENDRACHARYA KUNDARAGI
----------------------------------
ಏನಿಲ್ಲ ಈಗ ಜೀವನಕ್ಕೆ ಆಕಾರ ಗಾಳಿಗುಂಟೇ ಸುಖ ದುಃಖದ ಕನಸು ಚಿತ್ತ, ಬುದ್ಧಿಯೊಳಗೆ ಅಹಂಕಾರ ಪ್ರಜ್ಞೆ ಧಿಕ್ಕರಿಸಿದ ಮನಸು ಎದೆಯೊಳಗೆ ಸುಡುತಿದೆ ಲಾವಾಗ್ನಿ ಮತ್ತೆ ಅರಳದಂತೆ ಹೃದಯ ಕಮಲ ತನ್ನವರ ಕುಲುಮೆಯಲಿ ದಾವಾಗ್ನಿ ಸುಟ್ಟು ಕರಕಲಾದ ಸಂಬAಧದ ಅನಲ ಚೈತ್ರದಲ್ಲೂ ಫಾಲ್ಗುಣದ ಬೇಸರ ಮತ್ತೆ ಬಾರದೇ ಬಾಡಿದಂತೆ ಶಶಿರ ಹುಯ್ಯುವ ಮಳೆಯ ಹನಿಯಲ್ಲಿ ಹೊತ್ತಿದಂತೆ ಕಿಡಿ ವ್ಯಾಪಿಸಿತೇ ಜಗದಗಲ ನೆಕ್ಕುತಿದೆ ಎದೆಯ ಪ್ರೀತಿ ಕಾಪಿಡಲು ತನ್ನ ಬಿಕ್ಕುತಿದೆ ಒಡಲು ಕ್ರಾಂತಿಗೀಡಾಗುವ ಮುನ್ನ ನಿಂತ ನೆಲದಲ್ಲೇ ಹೊತ್ತಿದೆ ಉರಿ ಸೆಕೆ ಕೆನ್ನಾಲಿಗೆ ಚಾಚಿದೆ ಪ್ರೀತಿ ಸುಟ್ಟ ಅಗ್ನಿಶಿಖೆ
----------------------------------
Reg ID: HF25-5051
Please Note - You can vote only Once. If you have already voted - the voting will be disabled automatically by the system.