ಆಗಸದ ಆಸೆ
Submitted By: Dr. Pradeep D' Cunha
----------------------------------
ಬಾನಂಚಿನ ಚುಕ್ಕಿಯ ಮುಟ್ಟಬೇಕೆಂಬ ಬಯಕೆ ಆದರೇಕೊ ಮನದ ಆಳದಿ ಆ ಉನ್ನತಿಯ ಬಗ್ಗೆ ಅಂಜಿಕೆ ಕವಲೊಡೆಯದ ಮರದ ಗೆಲ್ಲಿನಂತೆ ಅರಳದೆ ಮುದುಡುವ ಹೂವಿನಂತೆ ಭುವಿ ಮುಟ್ಟದ ಮಂಜಿನಂತೆ ಲೋಪವಾದೇನೊ ಎಂಬೊಂದು ಶಂಕೆ ಆದರ ಮಧ್ಯದಲಿ ಕವಲೊಡೆಯುತಿಹುದು ಹೊಸತೊಂದು ಆಸೆಯ ಕುಡಿ ನಾಳೆಯೆಂಬ ಹೊಸದಿಗಂತಕ್ಕೆ ಇದಾಗಬಹುದೊಂದು ಮುನ್ನುಡಿ ಮರೀಚಿಕೆ ಮನಸ್ಸಿನ ಜಗಕೆ ಇದಾಗುತಿಹುದು ಅಗಾದ ಶಕ್ತಿಯ ಗುಡಿ.
----------------------------------
Reg ID: HF25-5057
Please Note - You can vote only Once. If you have already voted - the voting will be disabled automatically by the system.