ನಮ್ಮ ರೈತರು
Submitted By: Savita Mudgal
----------------------------------
ಭುವಿಗು ನಮಗು ಎಲ್ಲಿಲ್ಲದ ಬಂಧವು ಹಗಲಿರುಳು ನಮಗೆ ಪ್ರಕೃತಿಯೆ ಹತ್ತಿರವು|| ಬೆವರಿನ ಸಾಂಗತ್ಯಕೆ ಜಿನುಗುತ ಮೋಡವು ಸುರಿಸುತ್ತಾ ತಣಿಸುವ ಮನದ ತಲ್ಲಣವು|| ಉಡಿಯ ಗಂಟಲಿ ತುಂಬಿದೆ ಬೀಜವು ನೇಗಿಲ ಹೂಡುತ ಬಿತ್ತನೆಗೆ ಸಂಭ್ರಮವು|| ಕಣ್ನೋಟದಿ ಸಾವಿರ ಕನಸುಗಳು ತುಂಬಿಹವು ಕೋಟಿ ಹುಟ್ಟುಗಳಿಗೆ ತುತ್ತು ನೀಡುವವರು||
----------------------------------
Reg ID: HF25-5058
Please Note - You can vote only Once. If you have already voted - the voting will be disabled automatically by the system.