Submission 1606

ಆಧುನಿಕ ಸಂಸಾರ

Submitted By: MAMATHA RANI K

----------------------------------

ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಆಗ ನಾನು ಗರತಿಯಲ್ಲ ಆತ ಗಂಡನಲ್ಲ ಹಣವೇ ನಮ್ಮಯ ಜೀವನ ಈಗ ಒಲವೇ ಜೀವನ ಸಾಕ್ಷಾತ್ಕಾರ ಹೋಗಿ ಅನೈತಿಕತೆಯೇ ಬಾಳಿನ ಮಹತ್ಕಾರ್ಯವಾಗಿ ಹಳಿ ತಪ್ಪಿದೆ ಇಂದು ಸಂಸಾರ ಸಾರವಿಲ್ಲದೆ ಬರಡಾಗಿದೆ ಕುಟುಂಬ ಸಂತತಿ ವಿಸ್ತಾರವಿಲ್ಲದೆ ಸಖೀಗೀತ ಇಂದಿನ ಯುವ ಪೀಳಿಗೆ ಓದಿಲ್ಲ ಸಖ್ಯದ ಅಖ್ಯಾನ ಅನುಭವದಿ ದಕ್ಕಿಸಿಯೂ ಕೊಂಡಿಲ್ಲ ಕುಟುಂಬದ ಕನ್ನಡಿಯಲ್ಲಿ ಒಡಕಲು ಬಿಂಬಗಳು ವೈರಿಗಳಂತೆ ಪ್ರತೀಕಾರದ ರಕ್ತ ಪಿಶಾಚಿ ದಂಪತಿಗಳು ದಾಂಪತ್ಯ ಶಿಕ್ಷಣ ಯುವಜನರಿಗೆ ಕಲಿಸಬೇಕಿದೆ ಪಾಶ್ಯಾತ್ಯ ಸಂಸ್ಕೃತಿಯನ್ನು ತೊರೆಯಬೇಕಿದೆ ಭಾರತೀಯ ಭವ್ಯ ಸಂಸ್ಕೃತಿ ಮೆರೆಸಬೇಕಿದೆ

----------------------------------

Reg ID: HF25-5061

Please Note - You can vote only Once. If you have already voted - the voting will be disabled automatically by the system.

0
Votes
162
Views
1 Year
Since posted

VOTING Closed on Nov 30, 2025!

Scroll to Top