ಮತ್ತದೇ ದಿನಚರಿ
Submitted By: Vasudeva setty
----------------------------------
ಇರುಳು ಸರಿದು ಬೆಳಕು ಮೂಡಿತು ಕತ್ತಲೆಯ ಪೊರೆ ಸರಿಯತೊಡಗಿತು ಬೆಳಗಾಯಿತು ರವಿ ಮೂಡಿದನು ನೇಸರದ ಸ್ಪರ್ಶದಿ ಪುಳಕಗೊಂಡಿತು ಬಾನು ಅವಳ ಬಾಳ ದಿನಚರಿ ಶುರುವಾಯ್ತು ಅಂಗಳದಲಿ ರಂಗೋಲಿಯ ಬಿಡಿಸಿಯಾಯ್ತು ದೇವರಾ ಆರಾಧನೆಗೆ ಅಣಿಗೊಳಿಸಿ ಅಲ್ಲಿ ಪೂಜೆಯ ಮುಗಿಸಿ ಅಡಿಗೆ ಮನೆಯ ಸೇರುತಲಿ ಮನೆಯವರ ತಿಂಡಿ ತಯಾರಿಸುತಲಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಪತಿ ದೇವರ ಅವನ ವೃತ್ತಿಗೆ ಸಾಗಿಸಿ ಒಂದು ನಿಟ್ಟುಸಿರು ಬಿಡುತಲಿ ಅಲ್ಪ ವಿರಾಮದ ನಂತರ ಮತ್ತೆ ಮನೆ ಗೆಲಸಗಳಲಿ ಮಗ್ನವಾಗುತಲಿ
----------------------------------
Reg ID: HF25-5078
Please Note - You can vote only Once. If you have already voted - the voting will be disabled automatically by the system.