Submission 1742

ಆತ್ಮಾಯಣ

Submitted By: Prakash Bhavi

----------------------------------

ಅಂಶಾತ್ಮವೆಂಬ ಸಾಗರದ ನೀರಿನಹನಿ ಸೂರ್ಯನ ಶಾಖವ ತಾಳಿ ಆವಿಯಾಗಿ ಮೋಡದಲಿ ಒಂದಾಗಿ ಜೀವನದ ಬಿಸಿಲು ಸಿಡಿಲು ಮಿಂಚುಗಳನು ಸಹಿಸಿ ಸಮಯವೆಂಬ ಗಾಳಿಯ ಜೊತೆಗೆ ಸಾಗಿ ಮೋಕ್ಷವೆಂಬ ಶಿಖರದ ತುತ್ತತುದಿಯ ತಲುಪಿ ಅಜ್ಞಾನವೆಂಬ ಅಂಧಕಾರ ತೊರೆದು ಜ್ ಞಾನದ ಬೆಳಕು ತುಂಬಿದ ಪರಿಶುದ್ಧ ಆತ್ಮವಾಗಿ ಮಳೆ ಹನಿಯ ರೂಪದಲ್ಲಿ ನದಿಯ ನೀರನ್ನು ತಲುಪಿ ಮತ್ತೆ ಒಂದಾಯಿತು ಪೂರ್ಣಾತ್ಮನಾದ ಪರಮಾತ್ಮನೆಂಬ ವಿಶಾಲ ಸಾಗರದಲ್ಲಿ.

----------------------------------

Reg ID: HF25-5096

Please Note - You can vote only Once. If you have already voted - the voting will be disabled automatically by the system.

0
Votes
142
Views
11 Months
Since posted

VOTING Closed on Nov 30, 2025!

Scroll to Top