Submission 1764

ನೀನು ಯಾಕೆ ನಂಬಲಿಲ್ಲ...?

Submitted By: Shivaraj AK

----------------------------------

ಕಣ್ಣಿಂದಲೇ ನಿನ್ನ ಬಯಸಿ ಮನದಲ್ಲಿಯೇ ದೇವತೆಯಾಗಿಸಿ ಪುಟ್ಟ ಹೃದಯ ಮಂದಿರದಲ್ಲಿಟ್ಟು ನಿನ್ನ ಪ್ರತಿದಿನ ಪೂಜಿಸಿದರೂ, ನನ್ನ ನೀನು ಯಾಕೆ ನಂಬಲಿಲ್ಲ? ನಿನ್ನ ಹೊರತು ಯಾವತ್ತೂ ಬೇರೆಯವರನ್ನ ಬಯಸದೆ ಬೇರೆ ಏನನ್ನೂ ಯೋಚಿಸಲಾರದೆ ನಿನಗಾಗಿ ಬದುಕನ್ನೇ ನಾ ಮೀಸಲಿಟ್ಟರೂ ನನ್ನ ನೀನು ಯಾಕೆ ನಂಬಲಿಲ್ಲ? ನಿನ್ನ ಒಲವನ್ನು ಬಲವಾಗಿಸಿ, ನನ್ನ ಜೀವನದ ಸೆಲೆಯಾಗಿಸಿ, ಬಾಳಿನ ತೀವ್ರ ಬರಗಾಲದಲ್ಲಿ ಸುರಿವ ವರ್ಷಧಾರೆಯಾಗಿಸಿದರೂ ನನ್ನ ನೀನು ಯಾಕೆ ನಂಬಲಿಲ್ಲ? ನಾವಿಬ್ಬರೂ ಜೊತೆಗೂಡುವ ಮಹಾದಾಸೆಯನ್ನ ನೀ,ನುಚ್ಚು ನೂರಾಗಿಸಿದ ಮರುಕ್ಷಣವೂ ನಿನ್ನ ಪರಿಶುದ್ಧವಾದ ಪ್ರೀತಿಯನ್ನೇ ಬಯಸುವ ನನ್ನ ಹೃದಯವನ್ನಾದರೂ ನೀನು ಯಾಕೆ ನಂಬಲಿಲ್ಲ? ಇನ್ನೂ ನೀನಿಲ್ಲದ ಬದುಕು ಕ್ರೂರ ನರಕವೆಂದು ನಾ ಅರಿತು ತನುವ ತೊರೆದು ಅಂತರಾತ್ಮವ ಸುಟ್ಟು ಭಸ್ಮಗೊಳಿಸಿಕೊಂಡರೂ ನನ್ನ ನೀನು ಯಾಕೆ ನಂಬಲಿಲ್ಲ?

----------------------------------

Reg ID: HF25-5102

Please Note - You can vote only Once. If you have already voted - the voting will be disabled automatically by the system.

0
Votes
158
Views
11 Months
Since posted

VOTING Closed on Nov 30, 2025!

Scroll to Top