ನಿನ್ನ ನಗು
Submitted By: Kushal B H
----------------------------------
ನಿನ್ನ ನಗುವಿನ ಬೇಗೆಯಲ್ಲೇ ನಾ ಬೆಂದಿರಲು ಮೂಡಣದಿ ಮೂಡಿರುವ ಸೂರ್ಯನದೇನು ತಾಪ... ನಿನ್ನ ಮುಂಗುರುಳ ಸುವಾಸನೆಯನ್ನೇ ನಾ ಸವಿದಿರಲು ಮೈಸೂರಿನ ಮಲ್ಲಿಗೆಗೂ ಕೋಪ... ನಿನ್ನ ಕೋಮಲ ಕೇಶಗಳನ್ನೇ ನಾ ಶೃಂಗರಿಸಿರಲು ಮುಯೂರಿಯಾ ಗರಿಗಳದೇನು ಬಿನ್ನಾಣ... ದಿನವೂ ಅರಳುವ ನಿನ್ನ ಆ ಮೋರೆಯ ನಾ ಕಂಡಿರಲು ಮುಂಜಾನೆಗೊಮ್ಮೆ ಅರಳುವ ಆ ಮೊಗ್ಗುಗಳದೇನು ಕಂಪು... ಸವಿ ಮುತ್ತಿನ ತೊರೆಯ ನಿನ್ನ ಆ ದನಿಯಲ್ಲಿಯೇ ನಾ ಬದುಕಿರಲು ಸಪ್ತ ಸಾಗರದ ಆ ಅಲೆಗಳದೇನು ಛಾಪು...
----------------------------------
Reg ID: HF25-5119
Please Note - You can vote only Once. If you have already voted - the voting will be disabled automatically by the system.