ಅಪ್ಪನೇ ನನ್ನ ಆಂತರ್ಯದ ಶಕ್ತಿ...!
Submitted By: Su Shi Shanthakumar Harave
----------------------------------
ಅಪ್ಪ ಎಂಬುದು ಕೇವಲ ಎರಡಕ್ಷರವಲ್ಲ...! ಇದರಾಳವ ಉದ್ದವ ಯಾರೂ ಅರಿತವರಿಲ್ಲ...! ಅಪ್ಪನೆಂದರೆ ಆಕಾಶ ಮುಗಿಲೆತ್ತರ ಬಾನಗಲ...! ಅಪ್ಪನೇ ನಮ್ಮ ನಿಜವಾದ ಬಂಧುವು ಮಮತೆ ಪ್ರೀತಿಯ ಸಂಬಂಧವು ಜನುಮ ಜನುಮಗಳ ಅನುಬಂಧವು...! ಅಪ್ಪನ ಬೈಗುಳವು ನಮ್ಮ ಕಾಳಜಿಯಂತೆ ಎಂದೆಂದಿಗೂ ಜೊತೆಗಿರುವನು ಸ್ನೇಹಿತನಂತೆ ನಮ್ಮ ಭವಿಷ್ಯದ ಮಾರ್ಗದರ್ಶಕನಂತೆ ಮಕ್ಕಳಿಗಾಗಿ ಹಗಲಿರುಳು ದುಡಿಯುವನು ತನ್ನಾಸೆ ಕನಸುಗಳನ್ನು ತ್ಯಾಗ ಮಾಡುವನು ಇಡೀ ಕುಟುಂಬದ ಸಂರಕ್ಷಣೆ ಮಾಡುವನು ಅಪ್ಪನೇ ನನ್ನ ಜೀವನದ ಗುರುವು ಅಪ್ಪನೆಂದರೆ ನನಗೆ ಎಲ್ಲಿಲ್ಲದ ಭಕ್ತಿಯು ಅಪ್ಪನೇ ನನ್ನ ಆಂತರ್ಯದ ಶಕ್ತಿಯು..!
----------------------------------
Reg ID: HF25-5122
Please Note - You can vote only Once. If you have already voted - the voting will be disabled automatically by the system.