Submission 1893

ಮನಕ್ಕೊಂದು ಕಿವಿಮಾತು..

Submitted By: Rashmitha Gowda

----------------------------------

ಸುಮ್ಮನಿದ್ದು ಬಿಡು ಮನವೇ ನಿನಗೇಕೆ ಇಲ್ಲ- ಸಲ್ಲದ ಗೊಡವೆ ಅರಿತು ಅರಿಯದಂತೆಕೇ ನಟಿಸುವೆ ನಿಜವನರಿತು ನಿಶ್ಚಿಂತೆಯಾಗಿರು ಮನವೇ. ಬಿಟ್ಟು ಹೋಗುವ ನಾಲ್ಕು ದಿನದ ಸಂತೆಯಲ್ಲಿ ನೀನೇಕೆ ಮುಳುಗಿರುವೆ ನನ್ನವರೆಂಬ ಚಿಂತೆಯಲ್ಲಿ ಯಾರಿದ್ದರೂ ಇಲ್ಲದಿದ್ದರೂ , ನಡೆಸಬೇಕು ಜೀವನ ನಿನಗೇಕೆ ಯಾರು , ಏನೆಂದರು ಎಂಬ ಬಿಗುಮಾನ. ಹೆದರದಿರು, ಬೆದರದಿರು, ಒಂಟಿತನಕ್ಕೆ ಮರುಗದಿರು ಕಣ್ತುಂಬ ಅತ್ತು ಬಿಡು , ಹುಸಿ ನಗುವ ತೋರದಿರು ಜಗದ ಜನದ ಅಂಕುಡೊಂಕಿಗೆ ತಲ್ಲಣಿಸದಿರು, ದೇವರಂತಿದ್ದುಬಿಡು , ದೇವರಾಗಿಬಿಡು, ಸುಮ್ಮನಿದ್ದುಬಿಡು.

----------------------------------

Reg ID: HF25-5126

Please Note - You can vote only Once. If you have already voted - the voting will be disabled automatically by the system.

0
Votes
168
Views
11 Months
Since posted

VOTING Closed on Nov 30, 2025!

Scroll to Top