ತಾಯಿಯ ರೂಪಗಳು
Submitted By: Muskan Tahashildar
----------------------------------
ತಾಯಿಯಾಗಿ ಜೀವ ಕೊಟ್ಟವಳು ಸ್ನೇಹಿತೆಯಾಗಿ ನನ್ನೊಂದಿಗೆ ಬೆರೆತವಳು ಗುರುವಾಗಿ ಒಳ್ಳೆಯದನ್ನೇ ಕಲಿಸಿದವಳು ಸಂಗಾತಿಯಂತೆ ಜೊತೆಯಾಗಿ ನಡೆದವಳು ಕೊನೆಗೆ ಮಗುವು ಆಗುವವಳು ಮರೆಯಲಾರದ ನೆನಪು ನೀಡುವವಳು ಅತ್ತಾಗ ಲಾಲಿ ಹಾಡಿದವಳು ಹಸಿದಾಗ ತುತ್ತು ನೀಡಿದವಳು ಬಿದ್ದಾಗ ಓಡಿ ಬಂದವಳು ತೊದಲು ನುಡಿಯಿಂದ ಅಮ್ಮ ಎಂದಾಗ ಹಬ್ಬ ಮಾಡಿದವಳು ನನ್ನನ್ನು ಅಲಂಕರಿಸಿ ತಾನು ಖುಷಿ ಪಟ್ಟವಳು ನನಗೆ ದೊಡ್ಡ ಸಾಧಕಿ ಇವಳು ನನ್ನ ಜೀವನದ ಸ್ಪೂರ್ತಿ ಇವಳು ನನ್ನ ಖುಷಿಯಲ್ಲೇ ತನ್ನ ಖುಷಿ ಕಂಡವಳು ದಾರಿ ತಪ್ಪಿದಾಗ ಕೈ ಹಿಡಿದು ನಡೆಸಿದಳು
----------------------------------
Reg ID: HF25-5134
Please Note - You can vote only Once. If you have already voted - the voting will be disabled automatically by the system.