ಬಯಲಿಗೆ ಬಿದ್ದ ಭಾವ
Submitted By: DR RENUKATAI.M.SANTABA
----------------------------------
ಬಯಲಿಗೆ ಬಿದ್ದಿತಲ್ಲ ಭಾವ ಯಾರೂ ನೋಡದ ನೋವ ಮೀಟಿತು ಶೃತಿಯಿಲ್ಲದ ವೀಣೆ ಯಾರು ನುಡಿಸಿ ಮರೆತರೋ ತಂತಿ ಸ್ಪರ್ಶಿಸಿ ಅಡಗಿದರೋ ರಾಗ ತಾಳ ಲಯವ ನಾ ಕಾಣೆ ಕರುಣೆಯಿಲ್ಲದೆ ಮೀಟುತ ಉಕ್ಕಿನುಗುರ ಎದೆಗೆ ಒತ್ತುತ ಕರುಳ ಬಳ್ಳಿಗೆ ತೀವಿಯುತ ಉಕ್ಕಿ ಬಂದ ವೇದನೆ ತಳ್ಳುತ ಕಾಣರು ತಂತಿ ಮೀಟಿದವರು ನೋವ ನುಂಗಿದ್ದು ನೋಡರು ವೀಣೆಗೆ ವೇದನೆಯ ನೀಡಿದರು ನೊಂದೆ ಎಂದರೂ ಪೀಡಿಸಿದರು
----------------------------------
Reg ID: HF25-5137
Please Note - You can vote only Once. If you have already voted - the voting will be disabled automatically by the system.