ಪ್ರೀತಿಯ ತ್ಯಾಗ
Submitted By: Sharanabasava
----------------------------------
ನಿನ್ನ ನಗುವ ನೋಡಲು, ನನ್ನ ಪ್ರೀತಿ ಅಡಗಿತು. ಮನಸಿನ ಮಾತು ಹೇಳಲಾಗದೆ, ಮೌನದಿ ಮುಳುಗಿತು. ಬಾಲ್ಯದ ಕನಸು, ಪ್ರೀತಿಯ ನಗುವಾಗಿತ್ತು. ನಿನ್ನ ಆಸೆಗಳಲ್ಲಿ ನನ್ನ ಪ್ರೀತಿ ಸೋತಿತ್ತು. ನೀನು ಬೇರೆಯವರನ್ನು ಪ್ರೀತಿಸಿದಾಗ, ನನ್ನ ಹೃದಯ ಒಡೆದಿತ್ತು. ನನಗೆ ಪ್ರೀತಿ ಸಿಗಲಿಲ್ಲವೆಂದು, ಕಣ್ಣೀರು ಹೇಳಿತ್ತು. ನಿನ್ನ ಸಂತೋಷವೇ ನನ್ನ ಸಂತೋಷವೆಂದು ನಂಬಿದ್ದೆ. ಆ ನೋವಿನಲ್ಲೂ ನಿನಗಾಗಿ ನಗು ಬೀರಿದ್ದೆ. ನೀನು ನನ್ನೆಡೆಗೆ ತಿರುಗಿ ಬಂದಾಗ, ನನ್ನ ಹಾದಿ ದೂರವಾಗಿತ್ತು. ನನ್ನ ಪ್ರೀತಿ ನಿಷ್ಕಲ್ಮಶವಾಗಿತ್ತು, ಅದಕ್ಕೆ ಅದು ನಿನಗಾಗಿ ತ್ಯಾಗವಾಗಿತ್ತು. ನಿನ್ನ ಮದುವೆಗೆ ನಾನು ನೆರವಾಗಿದ್ದೆ, ನನ್ನ ಪ್ರೀತಿಯನ್ನು ನಾನೇ ಕೊಂದಿದ್ದೆ. ನಿನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೆ, ಆದರೆ ನನ್ನ ಪ್ರೀತಿ ಜೀವಂತವಾಗಿತ್ತು.
----------------------------------
Reg ID: HF25-5142
Please Note - You can vote only Once. If you have already voted - the voting will be disabled automatically by the system.