ಮೋಕ್ಷ
Submitted By: Sandhya badami
----------------------------------
ಅವಳ ಜೋಡಿ ನಯನಗಳು ಅವನ ಪ್ರೇಮಲೋಕದ ಪ್ರಜ್ವಲಿಸುವ ದೀವಿಗೆಗಳು|| ಅವಳ ನಿಷ್ಕಲ್ಮಷ ನಗು ಅವನ ಹೃದಯ ತುಡಿತದ ಗಟ್ಟಿಮೇಳಗಳ ನಾದ|| ಅವಳ ಮೌನದ ಮಾತುಗಳು ಅವನ ಅಭೇದ್ಯ ಧ್ಯಾನದ ಆತ್ಮದ ತೀರ|| ಅವಳ ಬೇಸರದ ನಿಟ್ಟುಸಿರು ಅವನೊಳು ನಡೆವ ಅಗ್ನಿಹೋತ್ರದ ತಪದ ಜ್ವಾಲೆ|| ಅವಳ ಮೌನ ವಿದಾಯ ಅವನ ನಿರ್ವಾಣದ ಹರಿವಾಣದಿ ಬಡಿಸಿಟ್ಟ ಮೋಕ್ಷ||
----------------------------------
Reg ID: HF25-5170
Please Note - You can vote only Once. If you have already voted - the voting will be disabled automatically by the system.