Submission 2055

ನೀವೆಲ್ಲರೂ ಆಗಬೇಕು

Submitted By: ಗುಡ್ಡಪ್ಪ.ಎನ್.ಚಟ್ರಮ್ಮನವರ

----------------------------------

ನೊಂದ ಕಡುಬಡವರ ಸುಡುಕಣ್ಣೀರು ತಂಪು ಮಾಡಿಕೊಡುವ ಥಂಡಾ ಥಂಡಾ ಪ್ರಿಜ್ಜು ಅರಿವಿಲ್ಲದವರಿಗೆ ಅರಿವಿನ ಸುಗಂಧ ಅರೆದು ಕೊಡುವ ಮಸಾಲಾ ಮಿಕ್ಸರ್ ಜನದೊಳಗಿನ ಮನಸಾಗರದ ರಾಡಿಹೊರದೂಡುವ ವಾಟರ್ ಫಿಲ್ಟರ್ ದಣಿದು ಬಾಯಾರಿದ ಶ್ರಮಜೀವಿಗಳಿಗೆ ಸಿಹಿ ನೀರುಣಿಸುವ ಅರವಟಿಗೆ ದುಷ್ಟದೇಶದ್ರೋಹಿಗಳ ಅಡ್ಡಗೆಡವಿ ಹೊಡೆದುರುಳಿಸುವ ಓಬವ್ವನ ಒನಕೆ ನೆಮ್ಮದಿ ಇಲ್ಲದ ಜನಜಂಗುಳಿಗೆ ಮನಃಶಾಂತಿ ನೀಡುವ ಏರಕೂಲರ್ ಶೋಷಣೆಗೆ ಸಿಕ್ಕು ಚರ್ಮಕಿತ್ತುಕೊಂಡ ಗಾಯಕೆ ಹಿಮಾಲಯದ ಮುಲಾಮು

----------------------------------

Reg ID: HF25-5188

Please Note - You can vote only Once. If you have already voted - the voting will be disabled automatically by the system.

0
Votes
173
Views
10 Months
Since posted

VOTING Closed on Nov 30, 2025!

Scroll to Top