ನನ್ನ ಪ್ರೀತಿಯ ತಂಗಿ
Submitted By: Raju Gasti
----------------------------------
ನೀನಿರುವೆ ಮೃದುವಾದ ಸುಮದಂತೆ! ಸದಾ ಪರಿಮಳ ಬೀರುವ ಹೂವಿನಂತೆ! ನಗುತಿರು ನೀ ಮಗುವಿನಂತೆ! ನಿನ್ನ ಪೊರೆಯುವ ನಾ ತಾಯಿಯಂತೆ! ಮಲಗು ನೀ ಹಾಯಾಗಿ ಮಗುವಂತೆ. ನಿನಗಾಗಿ ಕಾಯುವೆ ನಾ ತಂದೆಯಂತೆ! ನಿನ್ನ ನಿದ್ದೆಗೆ ಯಾವುದೇ ಭಂಗ ಬಾರದಂತೆ. ನಿನಗಾವುದೂ ದೃಷ್ಟಿ ತಾಕದಂತೆ! ಕಾಯುವೆ ನಿನ್ನ ಕಣ್ಮಣಿಯಂತೆ! ನೀ ನನ್ನ ಜಾಣ್ಮೆಯಂತೆ! ನನ್ನ ಜೊತೆಯಾಗಿರು ಆತ್ಮದಂತೆ! ನನ್ನಲಿ ಬೆರೆತಿರು ಉಸಿರಂತೆ! ಹಾಡು ನೀ ಕೋಗಿಲೆಯಂತೆ! ಕೇಳುವೆ ನಾ ಆರಾಧಕನಂತೆ! ನರ್ತಿಸು ನೀ ನವಿಲಿನಂತೆ! ನೋಡುವೆ ನಾ ಪ್ರೇಕ್ಷಕನಂತೆ!
----------------------------------
Reg ID: HF25-5205
Please Note - You can vote only Once. If you have already voted - the voting will be disabled automatically by the system.