Submission 2113

ಬಿರುಡೆ ತೆಗೆದ ಬೇರು

Submitted By: GEETHAMANJU BENNEHALLI

----------------------------------

ಬಾಟಲಿಯ ಬಿರುಡೆ ತೆಗೆದ ಬೇರು, ತಳದ ಹನಿ ನೀರಿಗೆ ನಾಲಿಗೆ ಸೋಕಿಸಿದೆ. ಕಣಿವೆಯ ಕಸ , ನದಿಯ ಬುರುಗು ಗುಳ್ಳೆಗಳು ಒಟ್ಟಾಗಿ ಕಲಿತ ಕೋಲಾಟ ಖಾಲಿ ಬಾಟಲಿಗಳೆ ಪರಿಕರ ವಾತ ಪಿತ್ತ ಕಫವೆಂದು ಮೂಗು ಬಾಯಿ ಮುಚ್ಚಿ ಅರೆಪ್ರಜ್ಞೆಸ್ಥಿತಿಯಲ್ಲರಳಿದ ಪಾಟಿನ ಹೂವು ಷೋಕೇಸ್ ಪುಷ್ಪರಾಣಿಗೆ ಶರಣಾಗಿತ್ತು ಬಳಸಿ ಬಿಸಾಡಿದ ಅಡುಗೆಮನೆ ರುಚಿ ನೆತ್ತರಲಿ ಬರೆಯುತ್ತಿದೆ ದಿನ ಭವಿಷ್ಯ ಭೂತ ಬೇತಾಳ ಜೋತ ಬಾವಲಿಗೂ ಕಾಂಕ್ರೀಟ್ ಕುಟೀರಗಳೆ ತಂಗುದಾಣ, ಪವನ ಪಂಕಗಳ ಜಿದ್ದಿಗೆ ರೆಕ್ಕೆ ಕತ್ತರಿಸಿಕೊಂಡ ಹಕ್ಕಿ ಕುಲಕ್ಕೆ ಕೊಡಲಿಯೇ ಬೇಕೆಂದೇನೂ ಇಲ್ಲ ಅದಕ್ಕಿಂತ ಹರಿತ ಆಯುಧ ನಮ್ಮಲ್ಲಿದೆ ಬಳಸುವ ನಾಜೂಕು ತಿಳಿದಿದೆ

----------------------------------

Reg ID: HF25-5215

Please Note - You can vote only Once. If you have already voted - the voting will be disabled automatically by the system.

1,783
Votes
4,503
Views
1 Year
Since posted

VOTING Closed on Nov 30, 2025!

Scroll to Top