Submission 2167

ನಾನು

Submitted By: Soumya Prakash Netrekar

----------------------------------

ಕನ್ನಡಿಯಲಿ ನೋಡಿದಾಗ ಆ ಸೆಲೆಯ ನೋಡಿದೆ ಯೌವನದ ಶೃಂಗಾರದಲಿ ಒಳನೋಟದ ಕೋಮಲತೆಯಲಿ ಹೆಣ್ತನವು ಮೈ ಸೇರಿದೆ ನನ್ನಾಳದ ಸಂಸರ್ಗದಲಿ ಬಂಧಗಳಿಲ್ಲ, ಭಾವ ತುಂಬಿದ ಜೀವನದಿ ಪ್ರೀತಿಯಲಿ ಮನ ರೆಕ್ಕೆ ಬಿಚ್ಚಿ ಹಾರಿದೆ ನಾ ಬರೀ ದೇಹವಲ್ಲ ಅಂತರಾಳದ ಒಡತಿ ಜೀವದಾತ್ಮದ ಸ್ಫೂರ್ತಿ ಇಲ್ಲ ಬಂಧವಿಲ್ಲ ಎನ್ನ ಅಸ್ಮಿತೆಗೆ ನಾ ಸ್ವಾತಂತ್ರ್ಯವ ಕಸಿದವಳು ಅಂತರಾತ್ಮದ ಪ್ರಜ್ಞೆ ಇತ್ತವಳು

----------------------------------

Reg ID: HF25-5234

Please Note - You can vote only Once. If you have already voted - the voting will be disabled automatically by the system.

3
Votes
184
Views
10 Months
Since posted

VOTING Closed on Nov 30, 2025!

Scroll to Top