ಬಾರದ ಕನಸು
Submitted By: Laxmi Dhoolikoppa
----------------------------------
ಬಾ ಎಂದು ಕೇಳಲಾರೆ ಆದರೆ ಬಂದರೆ ನಾ ಬಿಡಲಾರೆ ಅದಕೆ ಮೊದಲೇ ಬೇಡುವೆನು , ಹೋಗೆಂದು ನೀ ದೂರ ಮಾಡಬೇಡ ಹೃದಯದ ಮೇಲೆ ನೀ ಕಾರುಬಾರ ಕಾಡುವುದಾದರೂ ಏಕೆ? ಮೋಹವೊಂದಿದ್ದರೆ ಸಾಕೇ? ಪ್ರೀತಿಯೆಂಬ ಕತ್ತಲೆಯ ಸಮುದ್ರದಲ್ಲಿ ಈಜಬೇಕೆಂದಿರುವವಳು ನಾನು ಬೆಳಕೆಲ್ಲಿ ನಿನ್ನ ಹುಡುಕಲು ಎಂದು ಪ್ರಶ್ನಿಸಿರುವವನು ನೀನು ಗೊತ್ತಿತ್ತು ನೀನು ಬೇರೆಯವಳ ಸೊತ್ತು ಆದರೆ ಮನಸಿಗೆ ನೀನೇ ಬೇಕಿತ್ತು ಮಾಡಲಾರೆ ನಾ ನೀ ಬೇಕೆಂದು ಕರಾವತ್ತು ಆದರೆ ಬೇಡುವೆನು ಹೃದಯಕೆ ತರಬೇಡ ನೀ ಸಂಕಟದ ಕುತ್ತು
----------------------------------
Reg ID: HF25-5239
Please Note - You can vote only Once. If you have already voted - the voting will be disabled automatically by the system.