Submission 2207

ಹೆಣ್ಣನ್ನು ಈ ಜಗತ್ತಿನಲ್ಲಿ ಯಾರು ಅರಿತವರು..?

Submitted By: SUSHMA HK

----------------------------------

ನೀನಾರಿಗಾದೆ ಓ ಹೆಣ್ಣಿ ಈ ಜಗದಲಿ ಕಷ್ಟದಲ್ಲೂ ಜೊತೆ ನಡೆವೆ ಸುಖದಲ್ಲು ಜೊತೆ ಇರುವೆ ನಿನ್ನ ಕಂಡವರಾರು ನಿನ್ನ ನಿಂದವರಾರು ಮೊಟ್ಟಮೊದಲು ನೀನು ಯಾರು ನೀನಾರಿಗಾದೆ ಓ ಹೆಣ್ಣೆ ಈ ಜಗದಲಿ .....! ಆ ದೇವನೇ ಸೃಷ್ಟಿಸಿದ ಈ ನಿನ್ನ ಜನ್ಮವಾ ಆ ದೇವನೇ ಕರುಣಿಸಿದ ನಿನೊಳಗಿನ ಮತ್ತೊಂದು ಮರು ಜನ್ಮವಾ ನಿನ್ನ ಗುರಿ ನಿನ್ನ ಸಾಧನೆ ಕಂಡು ಆ ದೇವರೂ ಕೂಡ ಬೆರಗಾಗುವನು ಆದರೆ ಈ ಜಗದಲಿ ನಿನ್ನ ಉಸಿರಿಗೆ ಅವಕಾಶವಿಲ್ಲ ನೀನರಿಗಾದೆ ಓ ಹೆಣ್ಣಿ ಈ ಜಗದಲಿ !! ಭಯ ಭಕ್ತಿ ಇರುವ ನಿನಗೇ ಮಡಿಯಿಂದ ಇರುವ ಅವಕಾಶವಿಲ್ಲ, ದೇವಾಲಯದ ಗರ್ಭದಲಿ ಆಹ್ವಾನವಿಲ್ಲ. ಏನು ಪಾಪ ಮಾಡಿ ಸೃಷ್ಟಿಸಿಕೊಂಡೆ ಈ ನಿನ್ನ ಸಾರ್ಥಖ ಜನ್ಮವಾ ನೀನಾರಿಗಾದೆ ಓ ಹೆಣ್ಣಿ ಈ ಜಗದಲಿ ....!!

----------------------------------

Reg ID: HF25-5247

Please Note - You can vote only Once. If you have already voted - the voting will be disabled automatically by the system.

277
Votes
1,544
Views
10 Months
Since posted

VOTING Closed on Nov 30, 2025!

Scroll to Top