Submission 2273

ನನ್ನ ನಾಡು ನನ್ನ ನುಡಿ

Submitted By: ರೇಣುಕಾ. ವಿ. ಜೋಶಿ

----------------------------------

ಎನಿತು ಸುಂದರ ಈ ನಮ್ಮ ಕನ್ನಡ ಉಸಿರಾಗಲಿ ಕನ್ನಡ ಹಸಿರಾಗಲಿ ಕನ್ನಡ || ಪಲ್ಲವಿ|| ನಮ್ಮ ನಾಡು ಸಂಸ್ಕೃತಿಯ ಬೀಡು ವೀರ ಧೀರರಾಳಿದ ನೆಲೆವೀಡು ಸಾಹಿತ್ಯ ಶಿಲ್ಪಕಲೆಗಳ ತವರೂರು ಕನ್ನಡಿಗರಿಗೆ ಸ್ಫೂರ್ತಿಯ ಸೂರು ||1|| ಕನ್ನಡಾಂಬೆಯ ಕುಡಿಗಳು ನಾವು ಯಾರಿಗೂ ಕೊಡುವುದು ಬೇಡ ನೋವು ಮನೆಮನಗಳಲಿ ಉಳಿಯಲಿ ಪ್ರೀತಿ ಹಚ್ಚೋಣ ಕನ್ನಡದ ಜ್ಯೋತಿ ||2|| ಅದೇಕೊ ನಿರ್ಲಕ್ಷ ನಮ್ಮ ಭಾಷೆ ಎಂದೊಡೆ ಗಮನ ಸೆಳೆಯುತ್ತಿದೆ ಆಂಗ್ಲ ಭಾಷೆಯ ಕಡೆ ಪ್ರೀತಿಯಿಂದ ಉಳಿಸೋಣ ನಮ್ಮ ಭಾಷೆಯ ಕಲಿಯೋಣ ಗೌರವಿಸೋಣಅನ್ಯ ಭಾಷೆಯ || 3 ||

----------------------------------

Reg ID: HF25-5270

Please Note - You can vote only Once. If you have already voted - the voting will be disabled automatically by the system.

46
Votes
544
Views
10 Months
Since posted

VOTING Closed on Nov 30, 2025!

Scroll to Top