Submission 2315

ಇಳೆಗೆ ಬಂದ ಎಳಸು

Submitted By: Geeta S Shirolakar

----------------------------------

ಈಗ ತಾನೆ ಇಳೆಗೆ ಬಂದ ಎಳಸು ನೀನು. ಎನ್ನ ಸರ್ವ ಸುಖದ ಎಳೆಎಳೆಯು ನೀನು. ಮುಟ್ಟಲೇನು? ನಿನ್ನ ಗುಂಡು ಹಾಲುಗಲ್ಲ. ಮುತ್ತಿಡಲೇನು? ಹವಳದ ತುಟಿಗೆ ಜೇನು-ಬೆಲ್ಲ. ಕಪ್ಪಿಡಲೇನು? ಕೂಡಿದ ಕುಡಿ ಹುಬ್ಬಿಗೆಲ್ಲ. ತಲೆದೂಗಲೇನು? ನಿನ್ನ ಕಾಲ್ಗೆಜ್ಜೆಯ ನಾದಕೆಲ್ಲ. ಕಚಗುಳಿ ಇಡಲೇನು? ಎದೆಗೊದೆವ ಪಾದಕೆಲ್ಲ. ಹಾಲುಣಿಸಲೇನು? ಹಸಿದ ಹೊಟ್ಟೆಗೆ ಮೆಲ್ಲ. ಸಂಭ್ರಮಿಸಲೇನು? ಆಟದ ಕೇಕೆಗಳನೆಲ್ಲ. ಋಣಿಯಾಗಲೇನು? ಪಡೆದ ತಾಯ ಸುಖಕೆಲ್ಲ.

----------------------------------

Reg ID: HF25-5285

Please Note - You can vote only Once. If you have already voted - the voting will be disabled automatically by the system.

65
Votes
661
Views
10 Months
Since posted

VOTING Closed on Nov 30, 2025!

Scroll to Top