ಜಾತಿ
Submitted By: Rajeshwari Chapparad
----------------------------------
ಕುಲ ಕಸುಬಿನ ಬೇರಿನಿಂದ ಬೆಳೆದ ಜಾತಿ, ವರ್ಣ ಭೇದದ ಗೋಡೆಗಳಿಂದ ಮೂಡಿದ ಜಾತಿ, ಲಿಂಗ ಭೇದದ ಸರಪಳಿಯಿಂದ ಬಂಧಿಸಿದ ಜಾತಿ, ಜನನದ ಮೊದಲ ಉಸಿರಿನೊಂದಿಗೆ ಬರುವ ಜಾತಿ, ಮರಣದ ಕೊನೆಯ ಪಯಣದವರೆಗೂ ಹಿಂಬಾಲಿಸುವ ಜಾತಿ, ಮಂದಿರ ಮಸೀದಿಗಳ ಹೊಸ್ತಿಲಲ್ಲಿಯೇ ವಿಭಜಿಸುವ ಜಾತಿ, ಪ್ರಾರ್ಥನೆಯ ದೇವರೂ ಬೇರೆ ಬೇರೆ ಮಾಡುವ ಜಾತಿ, ಶಾಲೆ ಕಛೇರಿಯಲಿ ಮುಖವಾಡ ಧರಿಸುವ ಜಾತಿ, ರಾಜಕೀಯ ಬಂಡವಾಳವಾಗಿ ವ್ಯಾಪಾರವಾಗುವ ಜಾತಿ, ಪ್ರೀತಿಯ ಹೃದಯಗಳ ನಡುವೆ ಗಡಿ ಎಳೆಯುವ ಜಾತಿ, ಸ್ನೇಹದ ಕೈ ಜೋಡಿಸುವಾಗಲೂ ಪ್ರಶ್ನೆ ಕೇಳುವ ಜಾತಿ, ಮನುಷ್ಯತ್ವದ ಮೇಲೆ ಲೇಬಲ್ ಅಂಟಿಸುವ ಜಾತಿ, ತನ್ನ ಕಾಲ್ಪನಿಕ ಅಸ್ತಿತ್ವವನ್ನು ನಿಜವೆಂದು ನಂಬಿಸಿದ ಜಾತಿ, ಎಷ್ಟೋ ಶತಮಾನಗಳ ಮಿಥ್ಯೆಯ ಮೇಲೆ ನಿರ್ಮಿತವಾದಜಾತಿ, ಮನುಷ್ಯನ ಮನುಷ್ಯತ್ವವನ್ನೇ ಪ್ರಶ್ನಿಸುವ ಜಾತಿ.
----------------------------------
Reg ID: HF25-5286
Please Note - You can vote only Once. If you have already voted - the voting will be disabled automatically by the system.