ಮುಗಿಲ ಮೌನ ರಾಗ
Submitted By: Sowmya Praveen
----------------------------------
ಮುಗಿಲ ಮೌನ ರಾಗದಲ್ಲಿ ಅಳುವ ನದಿಯ ಹಾಡಿದೆ ಬತ್ತಿ ಹೋದ ನದಿಯ ಕಣ್ಗೆ ಮುಗಿಲು ಮಾತ್ರ ಕಂಡಿದೆ ಸಕಲ ಜೀವ ಜಾತಗಳಿಗೆ ನೀರನುಣಿಸಬೇಕಿದೆ ತೀಕ್ಷ್ಣ ದೃಷ್ಟಿಯಲ್ಲಿ ಸುಡುವ ರವಿಯ ಕೇಳಲೇನಿದೆ ? ಕರಿಯ ಮುಗಿಲು ತಾನು ನದಿಯ ಕರೆಗೆ ಕರಗಿ ಹೋಗಿದೆ ಮೌನ ರಾಗದಲ್ಲಿ ಮುಗಿಲು ಜೀವ ಜಲವ ಸುರಿಸಿದೆ
----------------------------------
Reg ID: HF25-5324
Please Note - You can vote only Once. If you have already voted - the voting will be disabled automatically by the system.