Submission 2474

ಆಧುನಿಕ ಏಕಲವ್ಯ

Submitted By: Dr. Iranna Injaganeri

----------------------------------

ಮನುಜ ಕುಲವು ಒಂದೇ ಎಂದು ಹೇಳುತಿಹರು ಮಾತಲಿ ತಮ್ಮ ಕುಲವೇ ಶ್ರೇಷ್ಠವೆಂದು ನಂಬುತಿದರು ಕೊನೆಯಲಿ ಬುದ್ಧ, ಬಸವ, ಗಾಂಧಿಗೆಲ್ಲಾ ಜಾತಿ ಗಡಿಯ ಕೊರೆದರು ಹಂಚಿ ತಿನ್ನುವ ದುಡ್ಡನೆಲ್ಲಾ ಗಂಟು ಮಾಡಿಕೊಂಡರು ಶುದ್ಧ ಕಾಯ, ಸ್ವಚ್ಛ ಮನವ ಕೆಡಿಸುತಿದರು ನಿತ್ಯವು ನಾಡು, ನುಡಿಯ ಹೆಸರಿನಲ್ಲಿ ಅದೇ ಹಗಲ ವೇಷವು ಎಲ್ಲವುಂಟು, ಎಲ್ಲರುಂಟು ದುಷ್ಟಕೂಟ ಮಂದಿಗೆ ರಕ್ತ ಬಸಿದು, ದುಡಿದ ಜನರು ಬಾಗಿಲಲ್ಲೆ ನಿಂತಿಹರು ಶಬ್ಧವೇದಿ ವಿದ್ಯೆ ಕಲಿತು ನೀನಾಗಬೇಕು ಏಕಲವ್ಯ ಬಿಟ್ಟಬಾಣ ತಪ್ಪದಂತೆ ಕೆಡವಬೇಕು ಮೌಢ್ಯವ ಮನದ ಕನಸು ಬಿತ್ತಬೇಕು, ವಿಶ್ವ ಪಥವ ತೋರಬೇಕು ಸ್ವಾಭಿಮಾನ ಬೆಳಗಬೇಕು, ತಲೆಯ ಎತ್ತಿ ನಡೆಯಬೇಕು

----------------------------------

Reg ID: HF25-5336

Please Note - You can vote only Once. If you have already voted - the voting will be disabled automatically by the system.

1
Votes
193
Views
9 Months
Since posted

VOTING Closed on Nov 30, 2025!

Scroll to Top