ಕಗ್ಗತ್ತಲ ಕವಿ
Submitted By: Ganesh Subraya Yaji
----------------------------------
ಕಾನನದ ಕತ್ತಲಲ್ಲಿ ಕುಳಿತ ಕವಿಯು, ಹೊಸದೊಂದು ಹಸಿಗಥೆಯ ಹೆಣೆಯುತ್ತಿರುವನು|| ಕಾಲ್ಮೇಲೆ ಕಾಲನಿಟ್ಟು, ಮಾಮರವನ್ನಾಧರಿಸಿ, ಇಣುಕಿಣುಕಿ ತನ್ನ ಮನವ ತಾ ನೋಡುತ್ತಿರುವನು|| ಹರಿವ ಗಾಳಿಯ ವಾಸನೆಯ ಕುಡಿದು, ತನ್ನ ಮನದ ಗಂಧಕ್ಕೆ, ತಾನೇ ನಗುತ್ತಿರುವನು|| ಶಿಖೆಯ ಸವರಿ, ನೇರದೃಷ್ಟಿಯಿಟ್ಟು, ತಾ ಹಾಕಿದ ಗಂಟ ತಾನೇ ಬಿಡಿಸುತ್ತಿರುವನು|| ಬಿಳಿಯ ವಸ್ತ್ರವ ಧರಿಸಿ, ಶಾಂತಿಯ ಬಯಸಿ, ಒಳಗೊಳಗೇ ಹೊಸಬಣ್ಣಗಳ ಸೃಜಿಸುತ್ತಿರುವನು|| ಮನದಾಳದ ತಿಳಿಗಣ್ಣ ಗೋಚರಕ್ಕೆ ಪರದೆಯ ಎಳೆದು, ಬೆಳಕಿನ ಪ್ರತಿಬಿಂಬವ ಕಾಡಲ್ಲೆಲ್ಲ ಅರಸುತ್ತಿರುವನು||
----------------------------------
Reg ID: HF25-5353
Please Note - You can vote only Once. If you have already voted - the voting will be disabled automatically by the system.