Submission 2516

ಕಲ್ಪನೆ

Submitted By: Anusha Arun Karadiguddi

----------------------------------

ಮನದ ಚಿತ್ರ ಬಿಳಿ ಹಾಳೆ ಮೇಲೆ ಬಿಡಿಸಿದಂತೆ, ಸೇರದ ತುದಿಗಳನ್ನು ಸರಿ ಗೆರೆಯಲ್ಲಿ ಜೋಡಿಸಿದಂತೆ, ಕಾಣದ ವರ್ಣಗಳಲ್ಲಿ ಅಂತ್ಯವಿಲ್ಲದ ಆಕರಗಳನ್ನು ತುಂಬಿದಂತೆ, ಹರಿವ ಹೊನಲಲ್ಲಿ ಹಿoತಿರುಗಿ ಈಜಿದಂತೆ, ಹುಟ್ಟಿಸಿದಾತ ಹೆಣೆದ ಹಣೆಬರಹ ತಾ ತಿದ್ದಿದಂತೆ! ವಿಚಿತ್ರ ವಿಚಾರಗಳ ಆಲಯವದು, ಕವಿಗೆ ಸುಂದರ ಸಾಲುಗಳ ಸುರಿಮಳೆ ಸುರಿಸುವುದು, ಮನದ ಮುಗಿಲದಗಲದ ಲೋಕದಲ್ಲಿ ನಡೆಯುವ ಚಿತ್ರೀಕರಣವದು! ಕಲ್ಪನೆ ಪ್ರತಿ ಕ್ಷಣ ಕೂಗುವುದು, ಪುಟ್ಟ ಲೋಕ ಬಿಟ್ಟು ತನ್ನಲ್ಲಿ ಬಂದು ಸೇರು ಎಂದೂ, ಜೀವನದಿಂದ ಮೈಲಿ ದೂರವದು, ಆದರೂ ಮನ ತನ್ನ ಹುಸಿ ಖುಷಿಗಾಗಿ ಕಲ್ಪನೆ ಕಾಣುವುದು! ತಾ ಕಾಣದ ಬಣ್ಣಗಳ ಮಳೆ ಬಿಲ್ಲು ಬೀಳುವುದು, ಬಂಜರು ಬರಡು ಭೂಮಿಯಲ್ಲಿ ಝರಿಯೂ ಹರಿಯುವುದು, ಬುದ್ಧಿಯ ಬಿಟ್ಟು ಮನವಷ್ಟೇ, ಚಿತ್ತಾರದ ಲೋಕದಲ್ಲಿ ವಿಹಾರ ಹೊರಟಿಹುದು!

----------------------------------

Reg ID: HF25-5355

Please Note - You can vote only Once. If you have already voted - the voting will be disabled automatically by the system.

160
Votes
955
Views
9 Months
Since posted

VOTING Closed on Nov 30, 2025!

Scroll to Top