ಸಮಯದ ಹಿಂದೆ ಸವಾರಿ
Submitted By: ಮಹಮ್ಮದಹುಸೇನ ಪಠಾಣ
----------------------------------
ಸಮಯದ ಹಿಂದೆ ಸವಾರಿ ನೀನೆ ಗೆಲುವಿನ ರುವಾರಿ, ಎಲ್ಲರೂ ಬಲ ಊರಿ ನಡೆಸಿಹರು ತಯಾರಿ ॥ ಕಾಲ ಕಾಲಕ್ಕೆ ಸರಿಯಾಗಿ ತೋರು ನೀ ಸರಿಯಾದ ದಾರಿ, ನಿನ್ನ ನಂಬಿ ಸಾಗಿದೆ ಈ ಬದುಕಿನ ಸವಾರಿ ॥ ನಿನ್ನ ಈ ಸಮಯದ ಪರಿ ಎಲ್ಲರೂ ಪಾಲಿಸುವುದು ಜರೂರಿ, ಯಶಸ್ವಿಯಾದರೆ ನೀ ಎಲ್ಲರಿಗೂ ಆಭಾರಿ ಕೆಟ್ಟದ್ದದಾದರೆ ಹಾಕುವರು ನಿನಗೆ ಚಿಮಾರಿ ॥ ಜೀವನದ ಸವಾರಿಗೆ ನೀನೆ ಎಲ್ಲರ ಮಾದರಿ, ಸಮಯದ ಹಿಂದೆ ಸವಾರಿ ನೀನೆ ಗೆಲುವಿನ ರುವಾರಿ ॥
----------------------------------
Reg ID: HF25-5356
Please Note - You can vote only Once. If you have already voted - the voting will be disabled automatically by the system.