ಮುದ್ದು ಮನಸೇ
Submitted By: ವಿಜಯ ವಿಕಟ
----------------------------------
ಮನಸೇ ಮತಾಡೆ ಸೊಗಸೇ ನೀ ನೋಡೆ ನನ್ನೆದೆ ಖಾಲಿ ಜಾಗದಲಿ ಮನೆಯ ನೀ ಮಾಡೆ.. ಅಂದದ ಅಪ್ಪುಗೆಯ ಸವಿಯಲು ಕಾದಿಹಿನೆ ಚೆಂದದ ನಿನ್ನ ಮುಖ ನೆನೆಯುತ ಕೂತಿಹೆನೆ.. ಪ್ರೇಮದ ಹೂಗಳನು ಮುಡಿಸುವೆ ನನ ನಲ್ಲೆ ಪ್ರೀತಿಯ ಕಾಣಿಕೆಯ ನೀಡುವೆ ನಿನಗಿಲ್ಲೆ.. ಹೆಚ್ಚಿಗೆ ಕಾಯಿಸದೇ ನನ್ನೆದೆ ಸೇರಿಬಿಡು ಹುಚ್ಚಿಗೆ ನಿನ್ನೊಲವ ಮದ್ದನ್ನು ನೀಡಿಬಿಡು.. ಇಬ್ಬರು ಸಾಗೋಣ ಚಂದಿರನಂಗಳಕೆ ತಾರೆಗಳಾ ಬಳಗ ಆಗಲಿ ನಮ್ಮ ಹೊದಿಕೆ
----------------------------------
Reg ID: HF25-5369
Please Note - You can vote only Once. If you have already voted - the voting will be disabled automatically by the system.