ನಾನು ಕಂಡ ನನ್ನ ನಲ್ಮೆಯ ನಾಡು
Submitted By: Goutami Shantappa Satapute
----------------------------------
ಅಸಂಖ್ಯ ಮಿನುಗುವ ನಕ್ಷತ್ರಗಳು. ವಿಶಾಲವಾಗಿ ಕಂಗೊಳಿಸುವ ಗಗನವು. ಕಂಕುಮದಂತೆ ಕಂಗೊಳಿಸುವ ಕಾಂತೇಯನು. ಕೆಂಪಾದ ಕಿರಣಗಳು, ತಂಪಾದ ಚಂದ್ರನು ಕಾಣುವುದು ನನ್ನ ಕರುನಾಡಿನಲ್ಲಿ।।೧।। ಝರಿ ಝರಿಯಾಗಿ ಹರಿಯುವ ನದಿಗಳ ನೀನಾದ. ಕಂಪನ್ನು ಸೂಸುವ ಪುಷ್ಪಗಳ ಸಂಗಮವೂ. ಇಂಪ್ಪನ್ನು ನೀಡುವ ಹಕ್ಕಿಗಳ ಕಲರವವು. ತಂಪನ್ನು ನೀಡುವ ವೃಕ್ಷಗಳಿರುವ ನಾಡೇ ನನ್ನನಾಡು।।೨।। ಸಾಧುಸಂತರು,ಶಿವಶರಣರ ನೆಲೆಬೀಡು. ಶ್ರೀಗಂಧದ ನಾಡು ಕರುನಾಡು. ಹಚ್ಚಹಸಿರಿನ ವನಸಿರಿಯ ನಾಡು ಕರುನಾಡು. ಕಾವೇರಿಯ ಉಗಮ ಸ್ಥಾನ ಈ ಕನ್ನಡನಾಡು।।೩।। ಕಪ್ಪು ಮಣ್ಣಿನ ನಾಡು ನನ್ನ ಕರುನಾಡು. ತಾಯಿ ಭುವನೇಶ್ವರಿಯ ನಾಡು. ಪರಂಪರೆಯ ತಾಣಗಳಿರುವ ನಾಡು, ನನ್ನ ಮಾತೃ ಭಾಷೆ ಕನ್ನಡ।।೪।।
----------------------------------
Reg ID: HF25-5411
Please Note - You can vote only Once. If you have already voted - the voting will be disabled automatically by the system.