Submission 2829

ಸಂತೆ

Submitted By: Uma C Hiremath

----------------------------------

ಜಗವೆಂಬುದೊಂದು ಸಂತೆ, ಸಂತೆಯಲಿ ನಾ ಬಂದು ನಿಂತೆ ಮನೆ ಕಾರು ಅಂಗಡಿ ಏನೇನು ಸಾಮಾನು, ಅವನೆಲ್ಲ ಕೊಂಡರೆ ಎನಗಾರು ಸಮಾನರು ಹೆಚ್ಚಿತು ಏನೆಲ್ಲ ಕೊಳ್ಳುವ ಭ್ರಾಂತಿ, ಸಿಗಲಿಲ್ಲ ಎನಗಲ್ಲಿ ಎಳ್ಳಷ್ಟು ಶಾಂತಿ ಬಗೆ ಬಗೆ ಸಾಮಾನಿನ ಸಂತೆಯಲಿ ನಿಂತು ಅವನೆಲ್ಲ ಪಡೆಯುವ ಚಿಂತೆಯಲಿ ಸಿಲುಕಿದೆ ಭೋಗವಸ್ತುಗಳ ಜಾಲದಲಿ ಹೊರಳಾಡಿ ಹೊಲಬುಗೆಟ್ಟು ನೂರು ಚಟಗಳಲಿ ಗುಣವೆಂಬ ವಸ್ತುವನು ಕೊಳ್ಳಲು ಬಂದೆ ನಡೆದು ಆಸೆ ಅಮಿಷಗಳ ಬೆನ್ನ ಹಿಂದೆ ಬೇಟದ ಬೇಟೆಯಲಿ ಮೈಮರೆತೆ ಗುಣವೆಂಬ ವಸ್ತುವಿನ ಮರೆತೆ ಸಂತೆ ಮುಗಿಯಿತು ಒಂದು ದಿನ ಮಣ್ಣಾಯಿತು ಎನ್ನ ತನುಮನ ಸಂತೆಯ ಡಾಂಭಿಕ ಜೀವನದಿಂದ ಮರಳಿದೆ ನಾ ಬರಿಗೃಯಿಂದೆ ಶಾಶ್ವತವಾದುದ ನಾ ತಿಳಿಯದೇ ಹೋದೆ ನಷ್ಟವಾದ ಮಾಯೆಗೆ ಬಲಿಯಾದೆ.

----------------------------------

Reg ID: HF25-5450

Please Note - You can vote only Once. If you have already voted - the voting will be disabled automatically by the system.

0
Votes
147
Views
8 Months
Since posted

VOTING Closed on Nov 30, 2025!

Scroll to Top