Submission 759

ಸುಂದರ ಶಿಲೆಯನ್ನಾಗಿ ಮಾಡಿರುವೆ

ರಚನೆ : ಮಹೇಶ ಎಮ್. ಎಸ್. ಉಪ್ಪಳ

----------------------------------

ನಿನ್ನ ಕಿರುನಗೆಯಲ್ಲಿ ನಾ ನಗುವ ಮಗುವಾಗುವೆ ಬಾಡುವ ಮಾತುಗಳಲ್ಲಿ ನಾ ಚಿಗುರುವ ಪದಗಳಾಗುವೆ ನಿನ್ನ ಬದುಕಿನಲ್ಲಿ ಭರವಸೆಯ ಬೆಳಕು ಚೆಲ್ಲುವೆ ದುಃಖಗಳನ್ನೆಲ್ಲ ಮರೆಸುವಂತ ಸುಖವಾಗುವೆ ನಿನ್ನ ಕೈ ಹಿಡಿದು ಜೊತೆಯಲ್ಲೆ ಜೊತೆಯಾಗಿ ನಾ ಬರುವೆ!!೧!! ಬದುಕಿರುವ ಪ್ರತಿಕ್ಷಣವು ನಿನಗಾಗಿ ನಾ ಬದುಕುವೆ ಬರುಡಾದ ಬಾಳಿನಲ್ಲಿ ಬಂಗಾರವ ನೀ ತಂದಿರುವೆ ಬಯಸದ ಭಾಗ್ಯವನ್ನು ಬಲಗಾಲಲ್ಲಿ ನೀ ಬರೆಸಿರುವೆ ಬಯಕೆಗಳೆಲ್ಲ ಬದಿಗೆ ಹೋತ್ತಿ ನಾ ಬಂದಿರುವೆ ಬರುವಿಕೆಗಾಗಿ ಮನದಲ್ಲಿ ನಿನ್ನ ಜಪ ಮಾಡುತ್ತಿರುವೆ!!೨!! ಕಂಗಳೆರಡು ಹುಡುಕಾಡಿ ನಿನಗಾಗಿ ಕಾದು ಕೆಂಗಿಟ್ಟಿವೆ ಕನಸುಗಳ ಮೂಟೆ ಹೊತ್ತು ಎದುರು ನೋಡುತ್ತಿವೆ ಕಂಬನಿಗಳು ಸುರಿದು ಹರಿಯುವ ನದಿಗಳಾಗಿವೆ ಕಲ್ಮಶವಿಲ್ಲದ ನಿನ್ನ ಪ್ರೀತಿಯಿಂದ ಕಲ್ಲಂತ ಈ ಹೃದಯವನ್ನು ನೀ ಕೆತ್ತಿ ಅದ್ಭುತ ಸುಂದರ ಶಿಲೆಯನ್ನಾಗಿ ಮಾಡಿರುವೆ!!೩!!

----------------------------------

ನೋಂದಣಿ ಐಡಿ : KPF-S1-5340

0
Votes
169
Views
1 Year
Since posted

Finished since 452 days, 15 hours and 51 minutes.

Scroll to Top