Submission 777

ಹೆಣ್ಣೆಂದರೆ ಬಣ್ಣವಂತೆ

ರಚನೆ : ದಶ್ಮಿತ ಕೆ.ಎಂ

----------------------------------

ಹೆಣ್ಣೆಂದರೆ ತರಹವಾರಿ ಬಣ್ಣವಂತೆ. ಒಮ್ಮೆಲೆ ಹೊಳಪನ್ನು ನೀಡುವಳಂತೆ.. ಊಸರವಳ್ಳಿಯಾಗಿ ಬಣ್ಣವ ಬದಲಾಯಿಸುವಳಂತೆ. ಹುಟ್ಟುತ್ತಲೆ ಮನೆಗೆ ಒಮ್ಮೆಲೆ ಬಾರವಾಗುವಳಂತೆ.. ಬೆಳೆಯುತ್ತಲೆ ತಂದೆ ತಾಯಿಯ ರಕ್ತ ಹೀರುವಳಂತೆ. ಮದುವೆ ಎಂಬ ಮಂಗಳ ಕಾರ್ಯಕ್ಕೆ ತಲೆ ಕೋಡುವಳಂತೆ.. ಗರ್ಭಿಣಿ ಎಂಬ ಪಟ್ಟವ ಹೋರುವಳಂತೆ. ತನ್ನ ಭಾರವ ಲೆಕ್ಕಿಸದೆ, ತನ್ನ ಹೊಟ್ಟೆಯಲ್ಲಿ ತನ್ನ ಮಗುವಿನ ಭಾರವ ಹೋರುವಳಂತೆ.. ಒಂದು ಜೀವಕ್ಕೆ ಜೀವನ ನೀಡಲೂ ತನ್ನ ನೋವನ್ನು ನುಂಗುವಳಂತೆ. ಆ ಜೀವಕ್ಕೆ ಹೊಸ ಬದುಕ ಕಟ್ಟಿಕೋಡುವಳಂತೆ.. ಅವಳೆಂದರೆ ಭೂ ಲೋಕದ ದೇವತೆಯಂತೆ. ಅವಳಿಲ್ಲದ ಭೂ ಲೋಕ ಮರುಭೂಮಿಯಂತೆ.. ಅವದೆಲ್ಲವ ಅವನಿಗೆ ಧಾರೆ ಎರೆದು,ಅವನನ್ನು ತೃಪ್ತಿ ಪಡಿಸುವಳಂತೆ....

----------------------------------

ನೋಂದಣಿ ಐಡಿ : KPF-S1-5352

0
Votes
193
Views
1 Year
Since posted

Finished since 452 days, 16 hours and 1 minutes.

Scroll to Top