Submission 1604

ಸುದ್ದಿಯಾದವು ಪದಗಳು

Submitted By: Jayanthi K Y

----------------------------------

ಅಕ್ಷರಗಳ ಸಂತೆಯಲಿ ಮಾರಾಟಕ್ಕಿದ್ದವು ಪದಗಳು ಖರೀದಿಗೆ ಬಂದವರಿಗೆ ಸಜ್ಜನಿಕೆಯ ಪದಗಳು ದುಬಾರಿಯೆನಿಸಿದವು! ಅಲ್ಲೇ ನಾ ಮುಂದು ತಾ ಮುಂದು ಎನುತ ಹಾರಾಡುತ್ತಿದ್ದ ಪದಗಳು ಅಗ್ಗದ ಬೆಲೆಗೆ ಬಿಕರಿಯಾದವು ಸಜ್ಜನಿಕೆಯ ಪದಗಳಿಗೆ ಶಬ್ದಕೋಶ ಸೇರುವ ಅವಕಾಶ! ಅಗ್ಗದವು ಅರಚುತ್ತಾ ಅತ್ತಲಿತ್ತ ಕುಣಿಯುತ್ತಾ ಕಾರಣವೇ ಇಲ್ಲದೆ ಬಳಸುವವರ ಬಾಯಲ್ಲಿ ಸಿಕ್ಕಿಬಿದ್ದವು! ಸುದ್ದಿಯಾಗುತ್ತಾ ಹೋದವು!!

----------------------------------

Reg ID: HF25-5059

Please Note - You can vote only Once. If you have already voted - the voting will be disabled automatically by the system.

90
Votes
662
Views
11 Months
Since posted

VOTING Closed on Nov 30, 2025!

Scroll to Top