Submission 2545

ಅವ್ವನ ಸೆರಗು

Submitted By: Harish Hadimani

----------------------------------

ಹುಟ್ಟಿದ ಹಸುಗುಸಿನ ಮೊದಲ ಅಳುವಿನ ಕಣ್ಣೀರು ಒರೆಸಿದ ಸೆರಗು... ಹೆಸಿಗೆ ಮಾಡಿಕೊಂಡಾಗಲೂ ಹಿಂಜರಿಯದೆ ಹುಮ್ಮಸ್ಸಿನಿಂದ ಮೈ ಮನ ಹಸನಾಗಿಸಿದ ಸೆರಗು.. ತೊಟ್ಟಲಲ್ಲಿ ಮಲಗಿದರೂ ಬಾರದ ನಿದರಗೆ ಸೀರೆಯ ಜೋಳಿಗೆ ಕಟ್ಟಿ ಜೋಗಳ ಗುನುಗಿದ ಸೆರಗು.. ರಾತ್ರಿ ಕನಸಲ್ಲಿ ಗುಮ್ಮಾ ಬಂದು ಕಾಡಿದಾಗ ಬಾಚಿತಬ್ಬಿ‌ ಲಾಲಿ‌ ಹಾಡಿದ ಸೆರಗು.. ಅದೆಷ್ಟೊ ಸಲ ಹಠಮಾಡಿ ಹಂಬಲಿಸಿದಾಗ ರಾಜನಂತೆ ಬೀಸನಿಕೆಯ ಮಮತೆಯ ಗಾಳಿ ಬೀಸಿದ ಸೆರಗು.. ಅಪ್ಪನ ಗದರೊ ಮಾತುಗಳಿಂದ ತಪ್ಪಿಸಲು ಅವಿತಕೊಂಡಾಗ ಧೈರ್ಯ ಹೇಳಿದ ಸೆರಗು.. ಅಂಗಳದಿಂದ ಎದ್ದುಬಿದ್ದು ಆಡಿ ಬಂದಾಗ ಅಕ್ಕರೆ ತೋರಿ ಅಂಗಾಲ ತೊಳೆದ ಸೆರಗು‌.. ಖುಷಿಯ ಪುಳಕಗಳ ಪುಕ್ಕಕ್ಕೆ ಬೆಚ್ಚಗಿನ ಗೂಡು ಕಟ್ಟಿ ಬಚ್ಚಿಟ್ಟ ಸೆರಗು.. ದಾರಿ ತಪ್ಪಿ ದಿಕ್ಕೆ ತೋಚದಿದ್ದಾಗ ಕೈಯಂತೆ ಹಿಡಿದು ದಾರಿ ತೋರಿಸಿದ ಸೆರಗು.. ಕಾಣುವ ಕಣ್ಣುಗಳಿಗೆ ಇದು ಅವ್ವ ಹೊದ್ದ ನೂಳಿನ ಸೀರೆಯ ಭಾಗವಷ್ಟೇ! ಅವ್ವನ‌ ಸೆರಗು ಮಕ್ಕಳ ಜೊತೆಗಿದ್ದರೆ ಕೊರಗಿಲ್ಲದೆ ನೆರಳಿನ ಬೆರಗು...

----------------------------------

Reg ID: HF25-5364

Please Note - You can vote only Once. If you have already voted - the voting will be disabled automatically by the system.

6
Votes
252
Views
11 Months
Since posted

VOTING Closed on Nov 30, 2025!

Scroll to Top