Submission 1987

ಸಂಗಾತಿ ಸಿಗದೆ ಓ ಜಗವೆ

Submitted By: Pradeep Kumar

----------------------------------

ಮಾತನಾಡದೆ ಉಳಿದ ಮಾತುಗಳಿಗೆ ಮಾತನ್ನು ಎದೆಯೊಳಗೆ ಮೌನವಾಗಿ ಬಚ್ಚಿಟ್ಟಿರುವೆನು... ಮನದೊಳಗೆ ಸಾವಿರ ನೋವುಗಳನ್ನು ಮುಚ್ಚಿಟ್ಟು, ಬಿಸಿಯೂಸಿರಿನ ಶಾಖವ ನೀಡಿ ಮುಗದಲಿ ಮಂದಹಾಸ ಬೀರಿರುವೆನು... ಮೊಗದಲಿ ಕಾಣುವ ಮಂದಹಾಸಕ್ಕಿಂತ, ಸಾವಿರ ಪಾಲಿನ ನೋವು ಕಾಣದ ಈ ಜಗವೇನು... ನನ್ನ ನಗು ಮೊಗವ ಕಂಡು, ಜಗವಿದು ತಿಳಿಯಿತು ನನ್ನ ಜಗದೇಕ ಶೂರಳೆಂದು... ನಗುವೇ ಇರಲಿ ಮೊಗದಳೆಂದು ಬಯಸಿದೆ ಈ ಜೀವನದಲಿ ನಾನು... ನನ್ನಿ ಮನದ ನೋವನ್ನು ಕಾಣದಂತಾಯಿತೇ ಜಗದಲಿ ನೀನು... ಈ ಮನದ ನೋವನ್ನು ಮಾತಾಡದೆ ನನ ಕಂಗಳಲಿ ಅರಿಯುವ ಜೀವವೊಂದು ಸಿಗದೆ... ಈ ಜಗವ ಎದುರಿಸಿ ನಿನ್ನೊಂದಿಗೆ ನಾನಿರುವೆ ಎಂದು ಕೈ ಹಿಡಿದು ನಡೆಸುವ ಸಂಗಾತಿ ಸಿಗದೆ ಓ ಜಗವೇ...

----------------------------------

Reg ID: HF25-5147

Please Note - You can vote only Once. If you have already voted - the voting will be disabled automatically by the system.

125
Votes
1,065
Views
11 Months
Since posted

VOTING Closed on Nov 30, 2025!

Scroll to Top