Submission 2081

ಸ್ಫೂರ್ತಿಯ ಸೆಲೆ ಜ್ಞಾನಾಶ್ರಮದ ನೆಲೆ

Submitted By: Dr. D. Francis Xavier

----------------------------------

ಸ್ಪೂರ್ತಿಯ ಸೆಲೆ, ಜ್ಞಾನಾಶ್ರಮದ ನೆಲೆ ಶತಮಾನದ ಸಂತ ನಡೆದಾಡಿದ ದಿವ್ಯತೆಯ ಸೆಲೆ ॥ ಮೌನ ಧ್ಯಾನದ ಸಾಕಾರ ಮೂರ್ತಿಯಾಗಿ ಪ್ರಣವ ಮಂದಿರದ ಗುರುವಾಗಿ ಜ್ಞಾನ ಬುತ್ತಿಯ ತುತ್ತನ್ನುಣಿಸಿ, ಎಲ್ಲರ ಬಾಳಿನ ಬೆಳಕಾಗಿ ಬಂದಿರಿ ನೀವು ವಿಶ್ವ ಗುರುವಾಗಿ ॥ ಮೂಡಣದಿ ಏರುತಿದೆ ಭಾಸ್ಕರನಂತೆ ಯುಗದ ಪುರುಷನಾಗಿ ಅವತರಿಸಿ ಬಂದಿರಿ ಪಾಪ ಕರ್ಮವ ಕಳೆಯುವ, ಮರ್ಮವ ಅರಿಯುವ ಬೆಳಕ ಚೆಲ್ಲಿದಿರಿ ನಾಡಿನೆಲ್ಲೆಡೆ ನುಡಿ ತೋರಣವ ಕಟ್ಟಿದಿರಿ ಅನವರತ ಪ್ರವಾಸ ಮಾಡಿದಿರಿ ಜ್ಞಾನಾಮೃತ ವಾಣಿಯ ನುಡಿದು ಬಾಳಿಗೆ ನಂದಾದೀಪವಾದಿರಿ ॥ ಬಯಲಲ್ಲಿ ಬಯಲಾಗುವ ಜೀವನದ ಅರ್ಥವ ಮಥಿಸಿ, ಮಥಿಸಿ, ಅಮೃತವ ಕಡೆ ಕಡೆದು ನಿಮ್ಮತ್ತ ಬಂದ ಮಕ್ಕಳಿಗೆ ಉಣಿಸಿದಿರಿ ಬಾಳುವ ಜೀವಕ್ಕೆ ಸ್ಪೂರ್ತಿಯಾದಿರಿ ॥ ಕಾಯ ಮರೆಯಾದರೂ, ನಿಮ್ಮಯ ವಾಣಿಯ ಅನುಸರಿಸುತ್ತಿಹುದು ಎಮ್ಮಯ ಮನ-ಮಂದಿರದಲ್ಲಿ ಕಾಣಿಸುವ ಕರುಣಿಸುವ ಪರಿಯ ನೆನೆದು ಪುನೀತ ಭಾವದಿ ಎಲ್ಲರ ಜೊತೆಗೂಡಿ ಸಾಗುವ ದಾರಿಯ ತೋರಿಸಿದಿರಿ ಶತಮಾನದ ಸಂತ ಶ್ರೀ ಸಿದ್ದೇಶ್ವರ ಗುರುಗಳಿಗೆ ಎನ್ನಯ ಕಾವ್ಯ ನಮನ

----------------------------------

Reg ID: HF25-5197

Please Note - You can vote only Once. If you have already voted - the voting will be disabled automatically by the system.

0
Votes
188
Views
10 Months
Since posted

VOTING Closed on Nov 30, 2025!

Scroll to Top