Submission 2125

ಹಡೆದಾಕೆ

Submitted By: PRAHLAD KUMAR INDAJE

----------------------------------

ಆ ಇರುಳಲಿ ಕತ್ತರಿಸಿ ಕರುಳ ಬಳ್ಳಿಯನು ಬಿದ್ದೆ ನಾ ಭುವಿಯಲಿ ತಲ್ಲಣಿಸಲು ಅವಳು ಅದೇ ಮಮತೆಯ ಉಪಮೆ ಎಂದು ತಿಳಿದಳು ಬೆಸುಗೆ ಇದು ಎಂದು ಅರಿತು ಉಸಿರಿಗುಸಿರನು ಬೆರೆಸಿ, ಜಗವ ತಿಳಿವ ತವಕದಿಂ ಎನ್ನ ಹೈಕಳ ಹಡೆದಾಕೆಯ ಕೈಪಿಡಿಯಲು ಜಗವ ಕಾಣಿಸಿದಾಕೆಯ ಮರೆತೆ ಅಂದೂ ಒಂದೂ ಅನ್ನಲಿಲ್ಲ ಆಕೆ ಎಂದಿಗಾದರೂ ತನ್ನ ಮಡಿಲಲ್ಲಿ ಬರುವನೆಂಬ ಬಯಕೆ ಅವಳು ತುತ್ತನ್ನೀಯದ ದಿನಗಳಿಲ್ಲ ಮುತ್ತು ಕೊಡುವಾಕೆ ಬರುವ ತನಕ ಮುತ್ತಾಯಿತು ಕುತ್ತು ಬೇಕಿತ್ತು ಅವಳ ಕೈತುತ್ತು ಎನ್ನುವಷ್ಟರಲ್ಲಿ, ಅವಳು ತೊರೆದಾಗಿತ್ತು ಈ ಜಗತ್ತು... ಮೈಮರೆತರೂ ಹಡೆದಾಕೆಯ ಮರೆಯದಿರು

----------------------------------

Reg ID: HF25-5219

Please Note - You can vote only Once. If you have already voted - the voting will be disabled automatically by the system.

252
Votes
1,707
Views
10 Months
Since posted

VOTING Closed on Nov 30, 2025!

Scroll to Top