Submission 2127

ಯಶೋಯಾತ್ರೆ

Submitted By: Chandramowly

----------------------------------

ಮನುಜ ಮಾರಣಯಜ್ಞಫಲಕಮೃತ ಸಿದ್ಧಿಯೇ? ದುಷ್ಟತೆಗೆ ದೃಷ್ಟಿ ಬರಲೆಂದು ಕಾಯುವುದೆ? ಕ್ಷಿಪಣಿಯಣುದಾಳಿ ಸುರಿಸುವುದೆ ಪುಷ್ಪವೃಷ್ಟಿ? ಶಾಂತಿಪ್ರಶಸ್ತಿ ಲಾಬಿಯಲಿ ಬೇಯುವುದೆ? ನಿಜವ ನುಡಿವನೆ ನೀಚ; ಸುಳ್ಳುಗಾರನೆ ಆಪ್ತ ! ಮೋಸದವ ಸಜ್ಜನ ನಟಿಸುವವನೆ ಬಂಧು ನೀತಿಪಥ ಖಾಲಿ ; ನಡೆವನೆ ತಬ್ಬಲಿಗ ಒಂಟಿ ಯಾತ್ರೆ ಸಾಗಿದೆ ಸತ್ಯ ಹಿಂದು ಮುಂದು ಹೊರ ಸಮರವೊಂದುಕಡೆ ಒಳ ಸಮರವಂತೆಯೇ ಹೊರನಾಟಕದ ಸೂತ್ರ ಸೆಳೆತ ಒಳಗೆ ಒಳಬಲವ ಮತಿಗಿಟ್ಟು ಹೊರಬಲವ ಕಾಲ್ಗಿಟ್ಟು ಯತ್ನಿಸದೆ ಮುಟ್ಟುವೆವೆ ನಮ್ಮ ನೆಲೆಗೆ ಹೇಗೆ ಬಂದೀತು ಯಶ: ಫಲ? ಕಷ್ಟ ಕಣ್ಣೀರು ಸುರಿಸಿ ಮನ ಮುರಿದು ಎದೆ ಮುಕ್ಕಾಗದೆ ಸಂಬಂಧಗಳು ಹಳಸಿ ಎದಿರೇಟುಗಳನುಣದೆ ಗುಣಪಾಠ ಕಲಿತು ಎದೆ ಉಕ್ಕಾಗದೆ.

----------------------------------

Reg ID: HF25-5220

Please Note - You can vote only Once. If you have already voted - the voting will be disabled automatically by the system.

1
Votes
173
Views
1 Year
Since posted

VOTING Closed on Nov 30, 2025!

Scroll to Top