ನೀನು ಹಾಡಿದಂತೆ...
Submitted By: ಡಾ.ನಿಂಗಪ್ಪ ಮುದೇನೂರು
----------------------------------
ನೀನು ಹಾಡಿದಂತೆ ನಾನು ಹಾಡಿದೆ ನೀನು ಬೆಳಗುವಂತೆ ನಾನು ಬೆಳಗಿದೆ//ಪ// ನನ್ನ ಉಸಿರಲಿ ನಿನ್ನ ಉಸಿರು ಬೆರೆತು, ಪ್ರತಿ ಉಸಿರಿಗೂ ನುಡಿ ಪದವಾಗಿದೆ ಪ್ರತಿ ಬೆಳಗು ನಿನ್ನ ಕಣ್ಣ ಮುಂದೆ ಹಾದು ಬಾಳು ಬೆಸೆದ ಒಡಲ ನೂಲಾಗಿದೆ// ನಿನ್ನ ಹೆಜ್ಜೆಯಲಿ ನನ್ನ ಹೆಜ್ಜೆಯನಿರಿಸಿ ನಡೆವ ಲೋಕದ ಹಾದಿ ಹುಲುಸಾಗಿದೆ ತಾವರೆಯ ಕೊಳದಲ್ಲಿ ನೆಟ್ಟ ಚಂದ್ರನ ಬಿಂಬ ಪಡೆವ ಸಮಸುಖದ ಭಾವ ನಮದಾಗಿದೆ// ಚೆಲುವನರಸುವ ನನ್ನ ಚೆಲುವಿಕೆಗೆ ಇಂಬಾಗಿ ನಿಂತ ಶಿಲ್ಪದ ತೇರು ನಿನದಾಗಿದೆ ತೇರನೆಳೆವ ಭಾವದಲಿ ಕೂಡಿ ಬೆಳೆದ ಮಗುವ ತುಟಿಯ ಅಂಚಿನ ನೊರೆ ಬಿಂಬ ಹಾಲ್ಗಡಲಾಗಿದೆ// ಹಬ್ಬಗಳಲ್ಲಿ ನೀನುಟ್ಟ ಸೀರೆಯಂಚಿನ ಬಣ್ಣ ಮಾಸದೆ ದಿನ ಉರುಳಿ ಮಾಗಿ ನಿಂತಿದೆ ಯಾವ ಭೇದವೂ ಇರದ ನಿನ್ನ ಹೃದಯದ ಹಾಡು ನಮ್ಮ ಕಷ್ಟವನು ಸೋಸಿ ತಿಳಿಯಾಗಿದೆ ಬೃಂದಾವನದಂತೆ ಹಸಿರಾಗಿದೆ//ಪ//
----------------------------------
Reg ID: HF25-5232
Please Note - You can vote only Once. If you have already voted - the voting will be disabled automatically by the system.