ಸಾವಿನ ನಾಟಕ
Submitted By: ಮಂಜುನಾಥ ಕರೇಕ್ಯಾತನಹಳ್ಳಿ
----------------------------------
ದೇವರು ಸೃಷ್ಟಿಸಿದ ನಾಟಕದ ಟೆಂಟಿನಲ್ಲಿ ಎಲ್ಲರೂ ಒಂದೊಂದು ಪಾತ್ರದಲ್ಲಿ ಆಡಬೇಕು ನಾಟಕವ ಸಾಯೋವರೆಗೆ ಮುಖವಾಡ ಕಳಚಿ ಬೀಳೊವರೆಗೆ ಇದೇನಿದು ಹಣೆಬರಹದ ನಾಟಕ ಸಾಯೋವರೆಗಿನ ನಾಟಕ ನಡೆಯುವ ಈ ನಾಟಕ ನಡೆಸುವ ಆ ದೇವರ ಕೈಯಲ್ಲಿ ಸಾಯೋವರೆಗೂ ನಮ್ಮ ಜೊತೆಯಲಿ ನಿರಂತರದ ನಾಟಕ ಹಚ್ಚಬೇಕು ಬಣ್ಣವ ಬಣ್ಣ ಅಳಿಸಿ ಮಣ್ಣು ಹಾಕೊವರೆಗೂ ನಮ್ಮ ಕಾಯಕದ ನಾಟಕ ಆಡಬೇಕು ನಾಟಕವ ಪರದೆ ಮುಚ್ಚವರೆಗೂ
----------------------------------
Reg ID: HF25-5246
Please Note - You can vote only Once. If you have already voted - the voting will be disabled automatically by the system.