Submission 2269

ದಸರಾ

Submitted By: NAGARAJNAYAK D DOLLIN

----------------------------------

ದಸರೆ ಎಂದರೆ ಹೆಸರಾಂತ ಜಂಬೂ ಸವಾರಿಯಷ್ಟೇ ಅಲ್ಲ ಅಲ್ಲಿ ಎಲ್ಲರನೂ ಒಂದುಗೂಡಿಸಿ ಬಾಳು ಬಂಗಾರವಾಗಿಸುವ ಉಸಿರಿದೆ ಗಜದ ಗಂಭೀರ ನಡೆ ನಮ್ಮೊಳಗಿನ ಮದವಡಗಿಸಲಿ ಎಳೆಯ ಮಾವುತನ ಹೊಟ್ಟೆಗೂ ಅನ್ನ ನೀಡುವ ಆ ಆನೆಯ ನಡೆ ಅಹಿಂಸೆಯ ಅ ಆ ಇ ಈ ಕಲಿಸಲಿ ಕುಮ್ಮಟದುರ್ಗದಲ್ಲಿ ಹುಟ್ಟಿ ಹಂಪೆ ಯಲ್ಲಿ ಅರಳಿ ಮೈಸೂರಿನಲ್ಲಿ ನಳನಳಿಸುತಿರುವ ದಸರೆ ಮತ್ತೇ ಮೆಟ್ಟಲಿ ದಾನವರ ಅಟ್ಟಹಾಸ ಕಲಬುರಗಿಯ ಗೌರಿಯ ಉರಿಳಿಸಿದವರ ಎದೆಯ ಧಗೆ ತಣ್ಣಗಾದಾಗಲೇ ಮಾನವಿಯತೆಯ ಮಹಾನವಮಿ

----------------------------------

Reg ID: HF25-5266

Please Note - You can vote only Once. If you have already voted - the voting will be disabled automatically by the system.

12
Votes
212
Views
10 Months
Since posted

VOTING Closed on Nov 30, 2025!

Scroll to Top