ನನ್ನವಳು
Submitted By: Panchakshari D
----------------------------------
ಕರಡು ರಾತ್ರಿಯಲಿ ಕನಸಲಿ ಕಾಡಿದ ಸ್ವಪ್ನ ಸುಂದರಿ ಬರಡು ಜೀವಕೆ ಭಾವನೆಗಳ ಬಣ್ಣ ಹಚ್ಚಿದ ರತ್ನಮಂಜರಿ ಭಾವಲಹರಿಯಲ್ಲಿ ಅಂದವೆಂಬ ಅಚ್ಚಿನಲಿ ಪ್ರೀತಿಯನ್ನೆಲ್ಲ ಅದರಲೊತ್ತಿ ಬ್ರಹ್ಮ ಸೃಷ್ಟಿಸಿದ ಕರ್ಪೂರದ ಬೊಂಬೆ ಅವಳು ಅವಳ ಕಣ್ಣುಗಳು ಮರೆಸುತ್ತವೆ ನನ್ನೆಲ್ಲಾ ಕಾಮನೆ ದ್ವನಿಕೇಳಿದರೆ ನಡುಗುವುದು ಮೈಮನ ಏಕೊ ಸುಮ್ಮನೆ ಏರಿಹುದು ಅವಳ ಹೆಸರಲ್ಲಿ ಆಗಸದೆತ್ತರದ ತಾಪ ಮೂಗುತಿಯ ಅಂಚಿನಲ್ಲಿಹುದು ಬಿಡಿಗಣ್ಣ ಮುಂಗೋಪ. ಕುಣಿವ ನವಿಲಿನ ಮಿಂಚಿನ ಕಣ್ಣಲ್ಲಿ ಹಸಿರು ಗಿಣಿಯ ಆ ಕೆಂಪು ಮೂಗಲ್ಲಿ ಹರಿವ ಝರಿಯಾಗಿ ದೇವತೆಯ ರೂಪದಲಿ ಬೀಸುವ ಗಾಳಿಯ ಬೆಚ್ಚನೆಯ ತಾಪದಲಿ ಬಣ್ಣಿಸಬಲ್ಲೆ ಅವಳನ್ನು ಹಲವಾರು ರೂಪದಲ್ಲಿ "ಹೆಸರು ಮಾತ್ರ ಕೇಳಬೇಡಿ ನಾನಿರುವೆ ಅವಳ ಪ್ರೀತಿಯ ಶಾಪದಲ್ಲಿ"
----------------------------------
Reg ID: HF25-5281
Please Note - You can vote only Once. If you have already voted - the voting will be disabled automatically by the system.