Submission 2452

ದೇವರ ಸ್ವಂತನಾಡು

Submitted By: Chikkanna D

----------------------------------

ದೇವರ ಸ್ವಂತ ನಾಡು ಪ್ರವಾಸಿಗರ ಸ್ವರ್ಗದ ಬೀಡು ದಿಕ್ಕುದಿಕ್ಕಲು ಪಿಸುಗುಟ್ಟುತಿತ್ತುಪ್ರಶಾಂತತೆಯ ಹಾಡು ಇಂದ್ರಿಯಗಳಿಗೆ ಇಂಪುಗಯ್ಯುವ ಕಲ್ಪವೃಕ್ಷಗಳ ಊರು ತನುವಿಗೆ ಅಮಲೇರಿಸುವ ಕಥಕ್ಕಳಿಯ ತವರೂರು ಮಾನವೀಯತೆಯ ಮರೆತು ನಡೆದರು ಮನುಜರು ಸ್ವಾರ್ಥದ ಆಸೆಗೆ ಭೂತಾಯಿಯ ಗರ್ಭವ ಬಗೆದರು ಮರಗಿಡಗಳ ಮಾರಣ ಹೋಮವ ಮಾಡಿದರು ನಿಷ್ಕಾರುಣ್ಯದಿ ಗಿರಿಶಿಖರಗಳ ಒಡಲ ಕೊರೆದರು ಕ್ಷಮಯಾಧರಿತ್ರಿ ಕ್ಷಮಿಸುವುದೇ ಮರೆತು ಹೋದಳು ಸದ್ಗುಣ ಸಂಪನ್ನೆ ಭೂರಮೆಯ ಸಹನೆ ಮೀರಿದಳು ಒಡಲೊಳಗೆ ಘರ್ಜಿಸಿ ವಿಕೋಪವ ತೋರಿದಳು ಗರ್ವದಾ ಮನುಜನ ಗರ್ವಭಂಗವ ಮಾಡಿದಳು ಪ್ರಕೃತಿಯ ರೌದ್ರನರ್ತನ ಕಂಡು ನನ್ನೆದೆಯಲಿ ತಲ್ಲಣ ಅದೆಷ್ಟು ರಹಸ್ಯಗಳಡಗಿದೆ ತನ್ನೊಡಲಲ್ಲಿ ನಾ ಕಾಣ ನಿಸರ್ಗದ ನಿಗೂಢತೆಯ ಕಂಡು ನಾನಾದೆ ನಿತ್ರಾಣ ದೇವರ ಸೃಷ್ಟಿಯಲ್ಲಿ ನಿಸರ್ಗ ವಿಸ್ಮಯಗಳ ತಾಣ ದೇವರ ಸ್ವಂತ ನಾಡು ಪ್ರವಾಸಿಗರ ಸ್ವರ್ಗದ ಬೀಡು ದಿಕ್ಕುದಿಕ್ಕಲು ಪಿಸುಗುಟ್ಟುತಿತ್ತು ಪ್ರಶಾಂತತೆಯ ಹಾಡು ಸ್ವಲ್ಪ ಕಿವಿಕೊಟ್ಟು ಕೇಳು ಪ್ರಸ್ತುತ ಮನುಜರ ಪಾಡು ಆ ದೇವರು ಕೂಡ ಅಳಿಸಲಾರನು ನಮ್ಮಯ ಕೇಡು

----------------------------------

Reg ID: HF25-5325

Please Note - You can vote only Once. If you have already voted - the voting will be disabled automatically by the system.

34
Votes
368
Views
11 Months
Since posted

VOTING Closed on Nov 30, 2025!

Scroll to Top