ಸ್ವಾತಂತ್ರ್ಯ ಮಹೋತ್ಸವ
Submitted By: Rameela Katariya
----------------------------------
ಜಾತಿ ಧಮ೯ದ ಜಾತ್ರೆಯ ದಿಬ್ಬಣದಲ್ಲಿ, ದಬ್ಬಿ ಹೋಗಿರುವ ಸಮಾಜದಲ್ಲಿ ನಾವು ಭಾರತೀಯರೆಂದು, ಆಚರಿಸುವೆವು ಸ್ವಾತಂತ್ರ್ಯ ಮಹೋತ್ಸವ, ನಾವೆಲ್ಲಾ ಸಂಘ ಜೀವಿ ಎನುತ ಕುಟುಂಬದ ಕೊಂಡಿಯನ್ನು ಕಟಕಟೆಯಲಿ ಬಿಚ್ಚಿಕೊಂಡು ಆಚರಿಸುವೆವು ಸ್ವಾತಂತ್ರ್ಯ ಮಹೋತ್ಸವ, ಸಾವ೯ಭೌಮದ ಮತ-ಮತಾಂತರವಾಗಿ ಸಾವ೯ಜನಿಕರ ಸವಲತ್ತು ಶೂಲಕ್ಕೇರಿಸಿ ನಮ್ಮ ಸ್ವಾತಂತ್ರ್ಯಕ್ಕಾಗಿ ಸಂವಿಧಾನವಿದೆಯಂದು ರಕ್ಷಣೆಯನ್ನು ಆರಕ್ಷಕರಲ್ಲಿ ಪಡೆವೆವು, ಶಿಕ್ಷಿತನಾಗಿದ್ದು ನನಗೋ, ಸಮಾಜಕ್ಕೋ ಎಂಬ ಗೊಂದಲದಲಿ ಪ್ರಜಾಪ್ರಭುತ್ವದ ಪ್ರಜೆಯು ರಜೆಯಲ್ಲಿದ್ದು ಆಚರಿಸುವನು ಸ್ವಾತಂತ್ರ್ಯ ಮಹೋತ್ಸವ.
----------------------------------
Reg ID: HF25-5328
Please Note - You can vote only Once. If you have already voted - the voting will be disabled automatically by the system.