ಹಿಂಗ್ ಆಗುತ್ತಂತ ನನಗೂ ಗೊತ್ತಿರಲಿಲ್ಲ...
Submitted By: Raj AA'ryan
----------------------------------
ಹಿಂಗ್ ಆಗುತ್ತಂತ ನನಗೂ ಗೊತ್ತಿರಲಿಲ್ಲ, ಗೊತ್ತಿದ್ರೆ ಇಷ್ಟೊಂದು ಡೀಪ್ ಆಗಿ ನಿನ್ನ ಲವ್ ಮಾಡ್ತಿರ್ಲಿಲ್ಲ. ಎದೆ ನೋವು ಅಂದ್ರೆ ಏನು, ಅನ್ನೋ ಅನುಭವ ಪರಿಚಯಿಸಿದ ದೇವತೆ ನೀನು. ಜಯದೇವದ ಖ್ಯಾತ ಹೃದ್ರೋಗ ತಜ್ಞ ರಿಪೋರ್ಟ್ ನೋಡಿ ಹೇಳಿದ್ರು; ನನಗೆ ಏನು ಆಗಿಲ್ಲ ಅಂತ. ಅವ್ರಿಗೇನ್ ಗೊತ್ತು ನೀನು ಎಷ್ಟು ಆಳದಲ್ಲಿ ಕೂತು ನನ್ನ ಹೃದಯಾನ ಆಪರೇಟ್ ಮಾಡ್ತಿದ್ಯಾ ಅಂತ. ಪ್ರತ್ಯೇಕವಾಗಿ ಹೃದಯಾನೇ ಅಂತಲ್ಲ, ಈ ಜೀವನಕ್ಕೆ ನೋವಾಗ್ತಿದೆ. ನಾನೇ ಈ ಜನಕ್ಕೆ ಅರ್ಥ ಆಗಲಿ ಅಂತ ಎದೆ ನೋವು ಅಂತ ಹೇಳ್ತಾ ಇರ್ತೀನಿ. ನಿನ್ ಹಂಗೆ ಈ ಜನಕ್ಕೂ ಫೀಲಿಂಗ್ಸ್ ಅರ್ಥ ಆಗಲ್ಲ, ಅರ್ಥ ಆದ್ರೂ ಅರ್ಥ ಮಾಡ್ಕೊಳ್ಳಲ್ಲ. ನಾವ್ ಬದ್ಕಿದ್ದಾಗ ಇನ್ಸ್ಟಾಗ್ರಾಂ ಅಲ್ಲಿ ಸ್ಕ್ರಾಲ್ ಮಾಡಿ ಮುಂದಕ್ಕೆ ಹೋದಂಗೆ ಹೊರಟ್ಹೋಗಿ. ಸತ್ತಮೇಲೆ ನಮ್ಮ ಫೋಟೋ ಹಾಕಿ ಶೋಕಿಯ ಶೋಕ ಪಡೋರ್ ಜಾಸ್ತಿ. ಅದಕ್ಕೆ ಹೀಗೆಲ್ಲ.! ನಿನ್ನನ್ನ ಇವತ್ತಿಗೂ ಅಷ್ಟೇ ಲವ್ ಮಾಡ್ತೀನಿ ಅದು ನಿನಗೂ ಗೊತ್ತಲ್ಲ... ಹಿಂಗ್ ಆಗುತ್ತಂತ ನನಗೂ ಗೊತ್ತಿರಲಿಲ್ಲ, ಗೊತ್ತಿದ್ರೆ ಇಷ್ಟೊಂದು ಡೀಪ್ ಆಗಿ ನಿನ್ನ ಲವ್ ಮಾಡ್ತಿರಲಿಲ್ಲ
----------------------------------
Reg ID: HF25-5327
Please Note - You can vote only Once. If you have already voted - the voting will be disabled automatically by the system.