ಕುಂಟುತ್ತ ಬಂತು, ಕುಂಟುತ್ತ ಹೋತು
Submitted By: Dr. Naveen Kulkarni
----------------------------------
ಮರಿ ಬೆಕ್ಕೊಂದು ಮನೆಗೆ ಕುಂಟುತ್ತ ಬಂತು ಹೆದರಿ ಹೆದರಿ ಅತ್ತ ಇತ್ತ ನೋಡುತ್ತಾ ನಿಂತು ದಿನಕಳೆದಂತೆ ಮನೆ ಮಂದಿಯ ಹತ್ತಿರ ಬಂತು ಹಾಲು ಕುಡಿದು ಮೀನಿನ ಕಾಳನ್ನ ತಿಂತು ಸಮಯ ಕಳೆದಂತೆ ಮನದ ಹತ್ತಿರ ಬಂತು ತಾಯಿ ಬೆಕ್ಕಾಗಿ ಮರಿಗಳನ್ನು ಜಗತ್ತಿಗೆ ತಂತು ಅಂತೂ ಇಂತೂ ಆ ದಿನ ಬಂತು ಬೆಕ್ಕೆರಡು ನನ್ನನ್ನ ಅಗಲಿ ಮನಸ್ತಾಪ ತಂತು ವಿಧಿಯಾಟಕ್ಕೆ ತಲೆ ತಗ್ಗಿ ನಿಂತು ಬೆಕ್ಕಿನ ತುಂಟಾಟಕ್ಕೆ ಕಡಿವಾಣ ಬಂತು ತಾಯಿ ಬೆಕ್ಕು ಮರಿಯಿದ್ದಾಗ ಕುಂಟತ್ತ ಬಂತು ತಾಯಿ ಬೆಕ್ಕು ಮರಿಯೊಂದಿಗೆ ಕುಂಟುತ್ತ ಹೋತು
----------------------------------
Reg ID: HF25-5342
Please Note - You can vote only Once. If you have already voted - the voting will be disabled automatically by the system.